ಬೆಂಗಳೂರು || ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಲೆಕ್ಟರ್ ಕೆಲಸ ಕೊಡಿಸೋದಾಗಿ ಲಕ್ಷ ಲಕ್ಷ ಉಂಡೆನಾಮ

ಬೆಂಗಳೂರು || ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಕೆಲಸ ಕೊಡಿಸೋದಾಗಿ ಲಕ್ಷ ಲಕ್ಷ ಉಂಡೆನಾಮ

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಲೆಕ್ಟರ್ ಕೆಲಸ (Railway Tticket collector Job) ಕೊಡಿಸುವುದಾಗಿ ಹೇಳಿ ಖದೀಮರು ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ನಡೆದಿದೆ.

ಘಟನೆ ಸಂಬಂಧ ವಿಜಯಪುರದ (Vijayapura) ಡಾ.ಲಕ್ಷ್ಮಿಕಾಂತ್ ಹೊಸಮನಿ, ಮುರುಳಿ, ಭೀಮರಾವ ಎಂಟಮನಿ, ಬಸು ಕಾಸಪ್ಪ, ಕೂಲಪ್ಪ ಸಿಂಗೆ, ಸಂತೋಷ್, ಶ್ರೀಧರ್ ಸೇರಿ ಒಟ್ಟು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ ಮೂಲಕ ತರಬೇತಿಗೆ ನಕಲಿ ಆರ್ಡರ್‌ ಕಾಪಿ ಕೊಟ್ಟಿದ್ದ ಖದೀಮರು ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್ ಟ್ರೈನಿಂಗ್ ಕೂಡ ಕೊಡಿಸಿದ್ರು. ಇದನ್ನು ನಂಬಿದ್ದ ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪತ್ರ ಹಿಡಿದು ಉದ್ಯೋಗಕ್ಕೆ ಜಾಯಿನ್‌ ಆಗಲು ಹೋದಾಗ ನಾಯಕ ಬಯಲಾಗಿದೆ. ಬಳಿಕ ವಂಚನೆ ಬಗ್ಗೆ ವಿಜಯಪುರದ ಹುಸನಪ್ಪ ಮಾಡ್ಯಾಳ್ ಸಿಸಿಬಿಗೆ ದೂರು‌ ನೀಡಿದ್ದು, 7 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೇ?

ರೈಲ್ವೆ ಇಲಾಖೆಯಲ್ಲಿ ಟಿಸಿ ಹುದ್ದೆ ಕೊಡಿಸುವುದಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದನ್ನೇ ನಂಬಿದ್ದ ವಿಜಯಪುರದ ಹುಸನಪ್ಪ ಮಾಡ್ಯಾಳ್, ಶಿವಕುಮಾರ್, ಅಶೋಕ್ ಹಾಗೂ ಇತರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಬೆಂಗಳೂರು, ವಿಜಯಪುರ ಸೇರಿ ಹಲವು ಕಡೆ ಕರೆಸಿ ಒಬ್ಬೊಬರಿಂದ ಹಂತಹಂತವಾಗಿ 20 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿದ್ದರು.

ಹಣ ಪಡೆದುಕೊಂಡು ಆನ್‌ಲೈನ್‌ ಮೂಲಕ ನಕಲಿ ಟ್ರೈನಿಂಗ್‌ ಆರ್ಡರ್‌ ಕಾಫಿ ಕೂಡ ಕೊಟ್ಟಿದ್ದರು. ನಂತರ ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್‌ ಟ್ರೈನಿಂಗ್ ಕೂಡ ಕೊಡಿಸಿದ್ದರು. ಟ್ರೈನಿಂಗ್ ಮುಗಿದ ಕೆಲ ದಿನಗಳ ನಂತರ ಡ್ಯೂಟಿಗೆ ಜಾಯಿನ್ ಆಗಲು ಹೇಳಿದ್ದಾರೆ. ಕೆಲಸ ಸಿಕ್ಕೇ ಬಿಡ್ತು ಎಂಬ ಖುಷಿಯಲ್ಲಿದ್ದರಿಗೆ ತಿಂಗಳು ಉರುಳಿದ್ರು ನೇಮಕಾತಿ ಪತ್ರ ಬರಲಿಲ್ಲ. ಇದರಿಂದ ಅನುಮಾನಗೊಂಡ ಆಕಾಂಕ್ಷಿಗಳು ಪರಿಶೀಲಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ. ಮೋಸ ಹೋದವರು ವಂಚಕರ ಬಳಿ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ. ಆ ಬಳಿಕವೇ ಆಕಾಂಕ್ಷಿಗಳು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ವಾಪಸ್ ಕೇಳಿದಾಗ ಕೊಡಲ್ಲ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *