ತಿಪಟೂರು ||ತಿಪಟೂರು ನಿಲ್ದಾಣದಲ್ಲಿ ಇನ್ಮುಂದೆ ಈ ರೈಲುಗಳ ತಾತ್ಕಾಲಿಕ ನಿಲುಗಡೆ

ತಿಪಟೂರು ||ತಿಪಟೂರು ನಿಲ್ದಾಣದಲ್ಲಿ ಇನ್ಮುಂದೆ ಈ ರೈಲುಗಳ ತಾತ್ಕಾಲಿಕ ನಿಲುಗಡೆ

ತಿಪಟೂರು: ನೈರುತ್ಯ ರೈಲ್ವೆ ವಲಯವು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ನೈರುತ್ಯ ರೈಲ್ವೆ ವಿಭಾಗದಿಂದ ಸಂಚರಿಸುವ ರೈಲುಗಳ ನಿಲುಗಡೆ ಅವಧಿ ವಿಸ್ತರಿಸಲಾಗಿದೆ. ಹೀಗಾಗಿ, ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ- ರಾಮೇಶ್ವರಂ ನಿಲ್ದಾಣಗಳ ಮಾರ್ಗವಾಗಿ ಸಂಚರಿಸುವ ರೈಲುಗಳು ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಇರಲಿದೆ. ಈ ಮೂಲಕ ತಿಪಟೂರಿನ ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆಯು ಸಿಹಿ ಸುದ್ದಿಯನ್ನು ಕೊಟ್ಟಿದೆ. ನೈರುತ್ಯ ರೈಲ್ವೆಯು ಪ್ರಯಾಣಿಕರಿಗೆ ಪ್ರಯಾಣಿಕ ಸ್ನೇಹಿ ಅನುಭವವನ್ನು ಕೊಡುವ ಮೂಲಕ ಸದಾ ಮುಂದಿದೆ. ಇದೀಗ ವಿವಿಧ ರೈಲುಗಳ ತಾತ್ಕಾಲಿಕ ನಿಲುಗಡೆ ತಿಪಟೂರಿನಲ್ಲೂ ಇರಲಿದೆ. ಯಾವೆಲ್ಲ ರೈಲುಗಳು ನಿಲ್ಲಲಿವೆ ಎನ್ನುವ ವಿವರ ಇಲ್ಲಿದೆ.

ಮೊದಲನೆಯದಾಗಿ ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ-ರಾಮೇಶ್ವರಂ ನಿಲ್ದಾಣಗಳ ನಡುವೆ ಚಲಿಸುವ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07355/07356) ರೈಲುಗಳಿಗೆ ತಿಪಟೂರು ನಿಲ್ದಾಣದಲ್ಲಿ ಮೂರು ಟ್ರಿಪ್ಗಳಿಗೆ ಹೆಚ್ಚುವರಿ ತಾತ್ಕಾಲಿಕ ನಿಲುಗಡೆ ನೀಡುವುದಕ್ಕೆ ನಿರ್ಧರಿಸಲಾಗಿದೆ.

ಡಿಸೆಂಬರ್ 14, 21 ಮತ್ತು 28, 2024 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ತಿಪಟೂರು ನಿಲ್ದಾಣಕ್ಕೆ ಬೆಳಗ್ಗೆ 11:43 ಗಂಟೆಗೆ ಆಗಮಿಸಿ, 11:45 ಕ್ಕೆ ಹೊರಡಲಿದೆ.

ಡಿಸೆಂಬರ್ 15, 22 ಮತ್ತು 29, 2024 ರಂದು ರಾಮೇಶ್ವರಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ತಿಪಟೂರು ನಿಲ್ದಾಣಕ್ಕೆ ಮಧ್ಯಾಹ್ನ 12:58 ಗಂಟೆಗೆ ಆಗಮಿಸಿ, 1:00 ಗಂಟೆಗೆ ನಿರ್ಗಮಿಸಲಿದೆ. ಸೂಚನೆ: ರೈಲು ಸಂಖ್ಯೆ 07355 ಅನ್ನು ಡಿಸೆಂಬರ್ 28, 2024 ರವರೆಗೆ ಮತ್ತು ರೈಲು ಸಂಖ್ಯೆ 07356 ಅನ್ನು ಡಿಸೆಂಬರ್ 29, 2024 ರವರೆಗೆ ಓಡಿಸಲು ಸೂಚಿಸಲಾಗಿದೆ ಎಂದು ನೈರುತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ – ರಾಮೇಶ್ವರಂ ಪ್ರದೇಶಕ್ಕೆ ಭೇಟಿ ನೀಡುವ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಡಲಾಗಿದೆ. ತಿಪಟೂರಿನ ರೈಲು ಪ್ರಯಾಣಿಕರಿಗೆ ಇದು ಸಹಕಾರಿಯಾಗಲಿದೆ. ಸಮಯದ ಅಭಾವದಿಂದ ದೊಡ್ಡ ರೈಲು ನಿಲ್ದಾಣಗಳಿಗೆ ಹೋಗುವುದು ಸಹ ತಪ್ಪಲಿದೆ.

ಸೈಕ್ಲಿಂಗ್ನಲ್ಲಿ ಮಿಂಚು: ಇನ್ನು ನೈರುತ್ಯ ವಲಯವು ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತೆ. ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಈಚೆಗೆ ಒಡಿಶಾದ ಪುರಿಯಲ್ಲಿ ಆಯೋಜಿಸಿದ್ದ 29ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲೂ ನೈಋತ್ಯ ರೈಲ್ವೆ ವಲಯದ ಸೈಕ್ಲಿಸ್ಟ್ಗಳು ಮಿಂಚಿದ್ದು ಸುದ್ದಿಯಾಗಿತ್ತು. ನೈಋತ್ಯ ರೈಲ್ವೆಯ ಏಳು ಸ್ಪರ್ಧಿಗಳ ತಂಡದಲ್ಲಿ ವೆಂಕಪ್ಪ ಕೆ, ಮೇಘಾ ಗುಗಾಡ್, ಕಾವೇರಿ ಮುರಾನಾಳ್ ಹಾಗೂ ಚೈತ್ರಾ ಬೋರ್ಜಿ ಎನ್ನುವ ಸ್ಪರ್ಧಿಗಳು ತಂಡ 60 ಕಿ.ಮೀ. ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಮೆರೆದಿದ್ದರು.

Leave a Reply

Your email address will not be published. Required fields are marked *