ತುರುವೇಕೆರೆ : ತಾಲ್ಲೂಕು ಕಛೇರಿ ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕೊನೆಗೂ ಸರ್ಕಾರದಿಂದ ಅನುಮತಿ ದೊರೆತಿದ್ದು ಶೀಘ್ರವೇ ಉದ್ಘಾಟನೆಗೆ ಶುಭ ಮಹೂರ್ತ ಕೂಡಿ ಬರಲಿದೆ.
ತಾಲ್ಲೂಕಿನಲ್ಲಿ ಬಹಳ ದಿವಸಗಳಿಂದಲೂ ಇಂದಿರಾ ಕ್ಯಾಂಟೀನ್ ತೆರೆಯಲು ಪಟ್ಟಣದಲ್ಲಿ ಸೂಕ್ತ ಸ್ಥಳದ ಹುಡುಕಾಟದಲ್ಲೆ ಕಾಲ ಉರುಳಿ ತುರುವೇಕೆರೆ ಜನತೆಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಕನಸಾಗಿಯೇ ಉಳಿದಿತ್ತು. ಇದೀಗ ತಾಲ್ಲೂಕು ಕಛೇರಿ ಹಿಂಭಾಗದ ಹಳೆಯ ಶೌಚಾಲಯದ ಸ್ಥಳ ನಿಗದಿಯಾಗಿದೆ.
ಇದಕ್ಕೆ ಸಂಬAಧಿಸಿದAತೆ ತುರುವೇಕೆರೆ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನಕುಮಾರ್ ಹಾಗೂ ಕಾಂಗ್ರೆಸ್ನ ಹಲವು ಮುಖಂಡರು ಭಾನುವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣನವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು. ಆ ಹಿನ್ನೆಲೆಯಲ್ಲಿ ಸಚಿವರು ತುರುವೇಕೆರೆಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಕೂಡಲೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಒಂದೇ ದಿನದಲ್ಲಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಈ ಯೋಜನೆಯಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆಶಾಭಾವನೆ ಮೂಡಿದಂತಿದೆ. ಈ ಸಂದÀರ್ಭ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ, ಉಗ್ರಯ್ಯ, ಕೊಂಡಜ್ಜಿ ಗ್ರಾ.ಪಂ. ಸದಸ್ಯ ಸೊಪ್ಪನಹಳ್ಳಿ ರಂಗನಾಥ್, ಪ.ಪಂ. ನಾಮಿನಿ ಸದಸ್ಯ ರುದ್ರೇಶ್, ಕೊಂಡಜ್ಜಿ ನಟರಾಜು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.