ಬೆಂಗಳೂರು: ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರ ದೈನಂದಿನ ಜೀವನದ ಅವಿಭಾಜ್ಯವೇ ಅಂಗವೇ ಆಗಿರುವ ನಮ್ಮ ಮೆಟ್ರೋ ಹೊಸ ಉಪಕ್ರಮ, ಟಿಕೆಟ್ ನಲ್ಲಿ ರಿಯಾಯಿತಿ ತರುತ್ತಿದೆ. ಈ ಭಾರಿ ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಆಘಾತ ನೀಡಲು ಸಜ್ಜಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಮತ್ತಷ್ಟು ದುಬಾರಿ ಆಗಲಿದೆ. ಈ ಕುರಿತು ಅಂತಿಮ ಹಂತದ ಶಿಫಾರಸುಗಳು ಶೀಘ್ರವೇ ಸರ್ಕಾರಕ್ಕೆ ಸಲ್ಲಿಕೆ ಆಗಲಿದೆ.
ಬೆಂಗಳೂರು ಮೆಟ್ರೋ ರೈಲುಗಳು ನಗರದಲ್ಲಿ ಓಡಾಡಲು ಶುರುವಾಗಿ ಒಂದೂವರೆ ದಶಕ ಕಳೆದಿದೆ. ಅಲ್ಲಿಂದ ಈವರೆಗೆ ಮೆಟ್ರೋ ಜಾಲ ಸಾಕಷ್ಟು ವಿಸ್ತರಣೆಗೊಂಡಿದೆ. ಪ್ರಯಾಣಿಕ ಸಂಖ್ಯೆ, ಖರ್ಚು ವೆಚ್ಚ ದುಬಾರಿ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಕೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ಧರಿಸಿದೆ.
ಸರ್ಕಾರದ ಮುಂದೆ ದರ ಏರಿಕೆಯ ಶಿಫಾರಸು ವರದಿ ಈ ಸಂಬಂಧ ಕೆಲವೇ ದಿನಗಳಲ್ಲಿ ಶುಲ್ಕ ನಿಗದಿ ಸಮಿತಿಯು (FFC) ಮೆಟ್ರೋ ಪ್ರಯಾಣ ಬೆಲೆ ಏರಿಕೆ ಮತ್ತದರ ಹೊಂದಾಣಿಕರಗಳ ಕುರಿತು ಅಂತಿಮ ಶಿಫಾರಸನ್ನು ರಾಜ್ಯ ಸರ್ಕಾಕ್ಕೆ ಶೀಘ್ರವೇ ಸಲ್ಲಿಸಲಿದೆ. ಅದನ್ನು ಸರ್ಕಾರ ಅನುಮೋದಿಸಿದರೆ, ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ಸಿಕ್ಕಂತಾಗುತ್ತದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೂಲಗಳ ಪ್ರಕಾರ, ಶೇಕಡಾ 15ರಿಂದ 25ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಈ ಹಿಂದೆ (2017) ಶೇಕಡಾ 10ರಿಂದ 15 ದರ ಹೆಚ್ಚಳವಾಗಿತ್ತು. ಸದ್ಯ ಹೆಚ್ಚಿಸಲು ಉದ್ದೇಶಿಸಿರುವ ಟಿಕೆಟ್ (ಟೋಕನ್) ಬೆಲೆ ಕನಿಷ್ಠ ಹತ್ತು ರೂಪಾಯಿಯಿಂದ 60 ರೂಪಾಯಿವರೆಗೆ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರೊಂದಿಗೆ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಐದು ರೂ.ರಿಯಾಯಿತಿ ಮುಂದುವರಿಯುತ್ತದೆ. ಕ್ಯೂಆರ್ ಕೋಡ್ ಟಿಕೆಟ್, ಟೋಕನ್, ಸ್ಮಾರ್ಟ್ ಕಾರ್ಡ್ ದರದಲ್ಲಿ ಹೆಚ್ಚಾದರೂ ಮೊದಲಿನಂತೆ ರಿಯಾಯರಿಗಳು ಮುಂದುವರಿಯಲಿವೆ. ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಸ್ಮಾರ್ಟ್ ಕಾರ್ಡ್ ಮೇಲಿದ್ದ ಶೇಕಡಾ 15 ರಿಯಾಯಿತಿಯನ್ನು 2020 ರಲ್ಲಿ ಶೇಕಡಾ 05 ಇಳಿಕೆ ಮಾಡಲಾಯಿತು. ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ನಮ್ಮ ಮೆಟ್ರೋದ ಟಿಕೆಟ್ ಬೆಲೆ ಬಗ್ಗೆ ನಿರ್ಧರಿಸಲು ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್. ಥಾರಣಿ ನೇತೃತ್ವದ ಮೂರು ಮಂದಿಯ ಸಮಿತಿ ರಚಿಸಲಾಗಿದೆ. ಆ ಸಮಿತಿಯು ಭಾರತೀಯ ಮತ್ತು ಅಂತಾರಾಷ್ಟ್ರೀಯ ನಗರಗಳಾದ್ಯಂತ ಮೆಟ್ರೋ ದರಗಳ ಕುರಿತು ಸಂಶೋಧನೆ ಮಾಡಿ ವರದಿ ಸಿದ್ಧಪಡಿಸಿದ್ದಾರೆ. ಸಾರ್ವಜನಿಕ ಸಲಹೆ ಕೋರಿದ್ದ ಮೆಟ್ರೋ ಮೆಟ್ರೋ ಕಾರ್ಯಾಚರಣೆಯ ವೆಚ್ಚ, ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು, ದುಬಾರಿ ಕಾಲದಲ್ಲಿ ವೆಚ್ಚದ ಸವಾಲು ಎದುರಿಸಲು ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿತ್ತು. ದರ ಏರಿಕೆಗೆ ಚಿಂತನೆ ಇದ್ದು, ಸಲಹೆ ನೀಡುವಂತೆ ಸಾರ್ವಜನಿಕರಲ್ಲಿ ಕೋರಿತ್ತು.