ಗುಬ್ಬಿ || ಕುಡಿಯುವ ನೀರಿಗೆ ಕಂಬೆರಹಟ್ಟಿ ಗ್ರಾಮಸ್ಥರ ಆಗ್ರಹ 

ಗುಬ್ಬಿ || ಕುಡಿಯುವ ನೀರಿಗೆ ಕಂಬೆರಹಟ್ಟಿ ಗ್ರಾಮಸ್ಥರ ಆಗ್ರಹ

ಗುಬ್ಬಿ : ಕಡಬ ಹೋಬಳಿ ಕಂಬೆರಹಟ್ಟಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿ  ಬತ್ತಿಹೋಗಿ, ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿದ್ದು ಇದನ್ನು ಸರಿಪಡಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಹೊದಗಿಸಬೇಕೆಂದು ಗುಬ್ಬಿಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಕಚೇರಿ ಮುಂದೆ ಖಾಲಿ ಕೊಡಗಳ ಪ್ರದರ್ಶನ ಮಾಡಿದರು.

ಕೇಂದ್ರ ಸರ್ಕಾರದ ಯೋಜನೆಯ ಜಲಜೀವನ್ ಮಿಷನ್‌ನಲ್ಲಿ ಕೊರೆದಿರುವ ಕೊಳವೆ ಬಾವಿಗಳಿಂದ ಸಂಪರ್ಕ ಕಲ್ಪಿಸಿಕೊಳ್ಳಲು ಹೋದಾಗ  ಖಾಸಗಿ ವ್ಯಕ್ತಿಗಳು ಸಂಪರ್ಕ ತೆಗೆದುಕೊಳ್ಳಲು ಬಿಡುತ್ತಿಲ್ಲ. ಕೂಡಲೇ ಜಲಜೀವನ್ ಮಿಷನ್ ಎಂಜಿನಿಯರ್ ಬಂದು ಈ ಸಮಸ್ಯೆ ಬಗೆಹರಿಸಿ ಕುಡಿಯುವ ನೀರು ಹೊದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕೊಪ್ಪ ಗ್ರಾಮ ಪಂಚಾಯ್ತಿಯ ಕೋಣಕೆರೆ ಮಜರೆ ಕಂಬೆರಹಟ್ಟಿ ಗ್ರಾಮದ ಸುಮಾರು ೮೦ ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವÀವಾಗಿದೆ. ವಯಸ್ಸಾದ ನನ್ನ ಕೈಲಿ ಪಕ್ಕದ ಊರಿಗೆ ಹೋಗಿ ನೀರು ತರುವ ಶಕ್ತಿ ಇಲ್ಲ ಎಂದು ಗ್ರಾಮದ ಕರಿಯಮ್ಮ ತಮ್ಮ ಅಳಲು. ತೋಡಿಕೊಂಡರು.

 ಪ್ರತಿಭಟನೆಯಲ್ಲಿ ಕಂಬೆರಹಟ್ಟಿ ಗ್ರಾಮಸ್ಥರು ಮತ್ತು ಮುಖಂಡ ಜುಂಜೇಗೌಡ ಭಾಗವಹಿಸಿದ್ದರು.

Leave a Reply

Your email address will not be published. Required fields are marked *