ಪಾವಗಡ : ತಾಲೂಕಿನಾದ್ಯಂತ ಜಲಜೀವನ್ ಮಿಷನ್ನಡಿ (ಜೆಜೆಎಂ) ಕಾರ್ಯ ನಿರ್ವಹಿಸಿರುವ ಶೇ. ೮೦ ರ ಒಳಗಿರುವ ಕಾಮಗಾರಿಯ ಬಿಲ್ ಮೊತ್ತದ ಹಣವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಜಿಪಂ ಸಿಇಒ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಮಾತನಾಡಿ, ಸರ್ಕಾರದ ನಿಯಮಾನುಸಾರ ಟೆಂಡರ್ ಅನ್ವಯ ಗುತ್ತಿಗೆದಾರರು ಕೆಲಸ ನಿರ್ವಹಿಸಿದ್ದು, ಶೇ.೮೦ರ ಒಳಗಿನ ಕಾಮಗಾರಿಯ ಬಿಲ್ಲು ತಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಜಲಜೀವನ್ ಮಿಷನ್ನಡಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತಾಲೂಕು ಗುತ್ತಿಗೆದಾರರ ಸಂಘದ ಬೆಳ್ಳಿಬಟ್ಟಲು ಚಂದ್ರಶೇಖರ ರೆಡ್ಡಿ ಮಾತನಾಡಿ, ಅಧ್ಯಕ್ಷರು, ಮನೆಮನೆ ಕುಡಿಯುವ ನೀರು ಪೂರೈಕೆಯ ಜಲಜೀವನ್ ಮಿಷನ್ನಡಿ ಈಗಾಗಲೇ ತಾಲೂಕಿನಾದ್ಯಂತ ಕಾಮಗಾರಿ ನಿರ್ವಹಿಸಿದೆ. ಶೇ.೮೦ರ ಒಳಗಿರುವ ಕಾಮಗಾರಿಯ ಬಿಲ್ ಮೊತ್ತದ ಹಣ ಬಿಡುಗಡೆ ವಿಳಂಬವಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಸಂಕಷ್ಟವುAಟಾಗಿದೆ. ಜೆಜೆಎಂ ಯೋಜನೆಯಡಿ ಈಗಾಗಲೇ ಕಾಮಗಾರಿಗಳನ್ನು ನಿರ್ವಹಿಸಿರುವ ಶೇ.೮೦ರ ಒಳಗಿರುವ ಬಿಲ್ ಮೊತ್ತದ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ತಡೆಹಿಡಿದಿರುವ ಕಾಮಗಾರಿಯ ಸಿ.ಸಿ.ಮೊತ್ತ ಬಿಡುಗಡೆ ಸೇರಿದಂತೆ, ಇ.ಓ.ಟಿ. ಸಮಸ್ಯೆ ನಿವಾರಣೆ ಹಾಗೂ ಇತರೆ ಗುತ್ತಿಗೆದಾರರ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು.
ಗುತ್ತಿಗೆದಾರರ ಸಮಸ್ಯೆ ಕುರಿತು ಸಂಘದ ಮನವಿ ಸ್ವೀಕರಿಸಿದ ಜಿಪಂ ಸಿಇಒ ಪರಿಶೀಲಿಸಿ ಶೀಘ್ರ ಸಮಸ್ಯೆ ಬಗೆಹರಿಸಲು ಕ್ರಮವಹಿಸುವ ಭರವಸೆ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಗಂಗಪ್ಪ, ಕೆ.ಪಾಲಾನಾಯ್ಕ, ಆರ್. ದಿವಾಕರ್, ಕಾರ್ಯದರ್ಶಿ ಡಿ.ಬಿ.ಲೋಕೇಶ್, ಬಹ್ಮನಂದರೆಡ್ಡಿ, ಮಾರಪ್ಪ, ಸಿಮೆಂಟ್ ರಾಮಾಂಜಿನಪ್ಪ, ಎನ್.ರಾಮಾಂಜಿನೇಯ, ಜೆ.ಎಂ.ಈರಾರೆಡ್ಡಿ, ವಿಜಯ ಭಾಸ್ಕರ್ ನಾಯ್ಡು, ಮಂಜುನಾಥ್ ಇತರೆ ಅನೇಕ ತಾಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿದ್ದರು.