ತುಮಕೂರು : ಸಾರ್ವಜನಿಕರ ದೂರಿನ ಮೇರೆಗೆ ಇತ್ತೀಚೆಗಷ್ಟೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಆರ್ ಟಿ ಒ ಕಚೇರಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು. ಈ ವೇಳೆ ಹಲವಾರು ದಾಖಲೆಗಳು ಕಾಣೆಯಾಗಿದ್ದರ ಬಗ್ಗೆ ಮಾಹಿತಿ ಕೂಡ ಬಹಿರಂಗಗೊಂಡಿತ್ತು.
ಇದರ ಮುಂದುವರೆದ ಭಾಗವಾಗಿ ಆರ್ಟಿಒ ಬ್ರೋಕರ್ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ದಿಬ್ಬೂರಿನಲ್ಲಿರುವ ಆರ್ಟಿಒ ಬ್ರೋಕರ್ ಸತೀಶ್ ಎಂಬುವವರ ಮನೆ ಮೇಲೆ ದಾಳಿ ಮಾಡಲಾಗಿದೆ. ಸತೀಶ್ ನಿವೃತ್ತ ಆರ್ಟಿಒ ಅಧಿಕಾರಿ ರಾಜು ಪರಮಾಪ್ತ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಿವೃತ್ತ ಆರ್ಟಿಒ ರಾಜು ಮನೆ ಮೇಲೆ ದಾಳಿ ಮಾಡಲಾಗಿದ್ದು, ಅವರ ಪರಮಾಪ್ತ ಸತೀಶ್ ಮನೆ ಮೇಲೆ ಕೂಡ ಲೋಕಾಯುಕ್ತ ದಾಳಿ ಮಾಡಲಾಗಿದೆ.
ಲೋಕಾಯುಕ್ತ ಎಸ್ ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸುಮಾರು ಎಂಟು ಜನರ ತಂಡದಿಂದ ದಾಳಿ ಮಾಡಿದ್ದು ಮನೆಯಲ್ಲಿ ಹಲವು ದಾಖಲೆಗಳ ಹುಡುಕಾಟ ನಡೆಸಿದೆ.