ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿAದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ. ಅದರ ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯೂ ನಡೆಯುತ್ತಿರಬೇಕು. ಹೀಗೆ ಆಗಲು ಬೆಳೆಗಾರರು ಮಾಡಬೇಕಾದ ಕೆಲವು ಅಗತ್ಯ ಕೆಲಸಗಳು ಹೀಗಿವೆ.
ಬೇಸಿಗೆ ಮತ್ತು ಮಳೆಗಾಲ ಎರಡರಲ್ಲೂ ಬುಡಕ್ಕೆ ಹಾಕುವ ಸಾವಯವ ತ್ಯಾಜ್ಯಗಳು ಕಳಿತು ಮಣ್ಣಿಗೆ ಲಭ್ಯವಾಗುತ್ತಾ ಇದ್ದರೆ ಅದರ ಫಲಿತಾಂಶ ಅತ್ಯಧಿಕ.
ತೆಂಗಿನ ತೋಟದಲ್ಲಿ ಬೇಸಿಗೆಯ ಕೆಲಸ: ತೆಂಗಿನ ಕಾಯಿಯ ಸಿಪ್ಪೆಯನ್ನು ಮರದ ಬುಡಕ್ಕೆ ಕವುಚಿ ಹಾಕುವುದರಿಂದ 50% ನೀರಿನ ಉಳಿತಾಯ ಮಾಡಬಹುದು. ಇದಕ್ಕೆ ಮಾಡಬೇಕಾದ ಕೆಲಸ ಎಂದರೆ ತೆಂಗಿನ ಮರದ ಬುಡಭಾಗದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ತೇವಾಂಶ ಇರುವಂತೆ ನೋಡಿಕೊಳ್ಳುವುದು ಮತ್ತು ಬುಡದಲ್ಲಿ ಇರುವ ಎಲ್ಲಾ ಸಾವಯವ ತ್ಯಾಜ್ಯಗಳೂ ಕರಗಿಕೊಂಡಿರುವAತೆ ನೋಡಿಕೊಳ್ಳುವುದು.
ತೆಂಗಿನ ಮರದಲ್ಲಿ ಏಕಪ್ರಕಾರದ ಇಳುವರಿ ಬರುವುದು ಹೇಗೆ? : ಬೇರುಗಳು ಹಬ್ಬಿರುವ ಭಾಗಕೆ ನಿರಂತರವಾಗಿ ತೇವಾಂಶ ಲಭ್ಯವಾಗುತ್ತಿದ್ದರೆ ಆ ಮರ ವರ್ಷದುದ್ದಕ್ಕೂ ಏಕಪ್ರಕಾರವಾಗಿ ಇಳುವರಿ ಕೊಡುತ್ತಿರುತ್ತದೆ.
ಏನು ಮಾಡಬೇಕು: ಸಾವಯವ ವಸ್ತುಗಳ ಮೇಲೆ ನೀರು ಬೀಳುತ್ತಿದ್ದರೆ ಅದು ಗೊಬ್ಬರವಾಗಿ ಲಭ್ಯ. ಆಗ ಆ ತ್ಯಾಜ್ಯಗಳು ಕರಗುತ್ತಾ ಇರುತ್ತವೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ. ನಿರಂತರವಾಗಿ ಸಾವಯವ ವಸ್ತುಗಳು ಲಭ್ಯವಾಗುತ್ತಾ ಇದ್ದರೆ ಮಣ್ಣಿನ ಜೈವಿಕ ಗುಣಧರ್ಮ ಮೇಲ್ದರ್ಜೆಗೆ ಏರಿ ಇಳುವರಿ ಹೆಚ್ಚಲು ಸಹಾಯಕವಾಗುತ್ತದೆ. ಇದನ್ನು ನಿಮ್ಮ ತೋಟದ ಮರಗಳಲ್ಲಿ ಮಾಡಿ ನೊಡಿ. ಎರಡು ಮೂರು ವರ್ಷಗಳಲ್ಲಿ ತೆಂಗಿನ ಗರಿ ಲಕ್ಷಣ ಬದಲಾವಣೆಯಾಗುತ್ತದೆ. ಹೂಗೊಂಚಲು ದೊಡ್ಡದಾಗಿ ಬೆಳೆದು, ಉತ್ತಮ ಇಳುವರಿ ಕೊಡುತ್ತದೆ.