ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸಂಬಂಧ ನಟ ದರ್ಶನ್ ತೂಗುದೀಪ್, ನಟಿ ಪವಿತ್ರಾ ಗೌಡ ಸೇರಿದಂತೆ ಎಲ್ಲ 17 ಆರೋಪಿಗಳು ಇಂದು ಶುಕ್ರವಾರ ಬೆಂಗಳೂರಿನ ಸಿಸಿಎಚ್ 57 ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಖುದ್ದು ಎಲ್ಲ ಆರೋಪಿಗಳು ಹಾಜರಾಗಬೇಕೆಂಬ ಸೂಚನೆ ಮೇರೆಗೆ ಕೋರ್ಟ್ಗೆ ಬಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ. ಕಟಕಟೆಯಲ್ಲಿ ಖುದ್ದು ದರ್ಶನ್ ಮತ್ತು ಪವಿತ್ರಾ ಗೌಡರನ್ನು ನ್ಯಾಯಾಧೀಶರು ಪ್ರಕರಣ ಸಂಬಂಧ ಪ್ರಶ್ನಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ನಟ ದರ್ಶನ್ ಅವರು ಮೇಲಿನ ಕೊಲೆ, ಕಿಡ್ನಾಪ್, ಹಲ್ಲೆ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಧೀಶರು ಕೇಳಲಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಲಯಕ್ಕೆ ಬಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರು ಬರೋಬ್ಬರಿ 06 ತಿಂಗಳ ಬಳಿಕ ಮುಖಾ ಮುಖಿ ಆಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವ ಸೆಕ್ಸನ್ ಗಳಡಿ ದಾಖಲಾದ ಆರೋಪಗಳ ಬಗ್ಗೆ ಖದ್ದು ವಿಚಾರಣೆ ನಡೆಸಲಾಗುತ್ತಿದೆ. ಕೋರ್ಟ್ಗೆ ಇಂದು ಎಲ್ಲ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ.
ಚಾರ್ಜ್ ಶೀಟ್ ನಲ್ಲಿ ಹಾಕಲಾದ ಸೆಕ್ಷನ್ ಗಳಡಿ ಆರೋಪಗಳ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಮಾಡಲಿದ್ದಾರೆ. ಈ ವೇಳೆ ಖುದ್ದು ಆರೋಪಿಗಳು ತಮ್ಮ ಮೇಲಿನ ಆರೋಪ ಕುರಿತು ಉತ್ತರಿಸುತ್ತಾರೆ. ಪವಿತ್ರಾ ಗೌಡಗೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆ , 364 ಕಿಡ್ನ್ಯಾಪ್ ಮತ್ತು 201 ಅಡಿ ಸಾಕ್ಷಿನಾಶ ಕೇಸ್ ಗಳ ಆರೋಪ ಹೊರಿಸಲಾಗಿದೆ . ಈ ಎಲ್ಲ ಆರೊಪಗಳನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಇದೇ ರೀತಿ ನಟ ದರ್ಶನ್ ಸೇರಿ ಎಲ್ಲ ಆರೋಪಿಗಳು ವಿಚಾರಣೆಯ ಟ್ರಯಲ್ ನಡೆಯಲಿದೆ. ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪ ಒಪ್ಪಿಕೊಂಡಲ್ಲಿ ಈ ವಿಚಾರಣೆಯ ಟ್ರಯಲ್ ಅವಶ್ಯಕತೆ ಇರುವುದಿಲ್ಲ. ತಮ್ಮ ಮೇಲಿನ ಎಲ್ಲ ಆರೋಪಗಳನ್ನು 17 ಆರೋಪಿಗಳ ಒಪ್ಪಿಕೊಳ್ಳುವ ಕುರಿತು ಕಟಕಟೆಯಲ್ಲಿ ನಿಲ್ಲಿಸಿ ನ್ಯಾಯಾಧೀಶರು ಪ್ರಶ್ನಿಸುತ್ತಾರೆ. ಈ ಸಂಬಂಧ ಎಲ್ಲ ಆರೋಪಿಗಳನ್ನು ಖುದ್ದು ಕೋರ್ಟ್ಗೆ ಪೊಲೀಸರು ಹಾಜರು ಪಡಿಸಿದ್ದಾರೆ.
ದರ್ಶನ್ ನೋಡಿ ಗಳಗಳನೇ ಅತ್ತ ಪವಿತ್ರಾ ಗೌಡ ನಟ ದರ್ಶನ್ ಮೇಲೆ ಅಪಾರ ಪ್ರೀತಿ ಹೊಂದಿರುವ ನಟಿ ಪವಿತ್ರಾ ಗೌಡ ಇತ್ತೀಚೆಗೆ ಬೇಲ್ ಮೇಲೆ ಹೊರ ಬರುತ್ತಿದ್ದಂತೆ ದರ್ಶನ್ ಹೆಸರಿನಲ್ಲಿ ಪೂಜೆ ನೆರವೇರಿಸಿದ್ದಾರೆ. ಕಳೆದ ಆರೇಳು ತಿಂಗಳೂ ಇಬ್ಬರು ಪ್ರತ್ಯೇಕ ಜೈಲಿನಲ್ಲಿಯೇ ಕಳೆದಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ಇಬ್ಬರು ಮುಖಾ ಮುಖಿ ಆಗಿರಲಿಲ್ಲ. ಇದೀಗ ತಿಂಗಳುಗಳ ಬಳಿಕ ಕೋರ್ಟ್ನಲ್ಲಿ ದರ್ಶನ್ ರನ್ನು ನೋಡುತ್ತಿದ್ದಂತೆ ನಟಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ಕೆಲವು ಕ್ಷಣಗಳ ಕಾಲ ಭಾವುಕರಾಗಿದ್ದಾರೆ. ಸಿಸಿಎಚ್ 57 ಕೋರ್ಟ್ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಅನ್ನು ಮುಂದಿನ ತಿಂಗಳ ಫೆಬ್ರವರಿ 25ಕ್ಕೆ ಮುಂದೂಡಿದ್ದಾರೆ. ಮುಂದಿನ ದಿನಾಂಕದಿಂದ ಆರೋಪಿಗಳ ಖುದ್ದು ವಿಚಾರಣೆ ನಡೆಯಲಿದೆ.