ಮೈಸೂರು || ವಿದ್ಯುತ್ ನಿಗಮದಲ್ಲಿ 250 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು || ವಿದ್ಯುತ್ ನಿಗಮದಲ್ಲಿ 250 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರಿನಲ್ಲಿ ವಿವಿಧ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಪದವಿ, ಡಿಪ್ಲೊಮಾ ಮತ್ತು ಪದವೀಧರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಹುದ್ದೆ ವಿವರ: ಒಟ್ಟು 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಈ ಅವಧಿಯಲ್ಲಿ ಗೌರವ ಧನ ನೀಡಲಾಗುವುದು.

•          ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಶಿಪ್ – 80

•          ಡಿಪ್ಲೊಮಾ ಅಪ್ರೆಂಟಿಸ್ಶಿಪ್ – 55

•          ಪದವೀಧರ ಅಪ್ರೆಂಟಿಸ್ – 115

ವಿದ್ಯಾರ್ಹತೆ: ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಂಡಿರಬೇಕು. ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಆಗಿರಬೇಕು. ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಬಿಕಾಂ, ಬಿಬಿಎ, ಬಿಸಿಎ, ಬಿಎ, ಬಿಎಸ್ಸಿ ಪದವಿಯನ್ನು ಹೊಂದಿರಬೇಕು.

ಈ ಹುದ್ದೆಗೆ 2020, 21, 22, 23 ಮತ್ತು 24ರ ಸಾಲಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಮೊದಲು ನ್ಯಾಷನಲ್ ವೆಬ್ ಪೋರ್ಟಲ್ನಲ್ಲಿ (ಎನ್ಎಟಿ) ಅಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಚೆಸ್ಕಾಂ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 6 ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ nats.education.gov.in/index.php ಮತ್ತು cescmysore.karnataka.gov.in ಭೇಟಿ ನೀಡಿ

Leave a Reply

Your email address will not be published. Required fields are marked *