ಮಂಗಳೂರು: ಜನವರಿ 17ರಂದು ಮಂಗಳೂರು ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡ್‌ನ ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಅತಿ ದೊಡ್ಡ ದರೋಡೆಯಾಗಿದ್ದು, ಈ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ದರೋಡೆ ರಾಷ್ಟ್ರಮಟ್ಟದಲ್ಲಿ ಸಂಚಲ ರೂಪಿಸಿತ್ತು. ಈ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 18 ಕೆಜಿ ಚಿನ್ನ ಸಹಿತ 11 ಲಕ್ಷ ನಗದು ದೋಚಿ ಪರಾರಿಯಾಗಿದ್ದವರನ್ನು ತಮಿಳುನಾಡಿನಲ್ಲಿ ಹಿಡಿದು ತಂದಿದ್ದು. ಪೊಲೀಸರ ಸಾಹಸ ಮೆಚ್ಚುವಂತಹದ್ದು. ಇನ್ನು ರಾಶಿ ರಾಶಿ ಚಿನ್ನ, ಹಣ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಮಂಗಳೂರಿನ ಉಳ್ಳಾಲ ತಾಲೂಕಿನ ಕೆಸಿ. ರೋಡ್ ಜಂಕ್ಷನ್ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಜ.17ರಂದು ದರೋಡೆ ನಡೆದಿತ್ತು. ಈ ಪ್ರಕರಣ ಸಂಬOಧ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮುಂಬೈನ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ 36, ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ 36, ಮುಂಬೈನ ದೊಂಬಿವಲಿ ವೆಸ್ಟ್ನ ಯೊಸುವಾ ರಾಜೇಂದ್ರನ್ 35, ಷಣ್ಣುಗ ಸುಂದರO ಎಂಬುವರನ್ನು ಬಂಧಿಸಲಾಗಿದೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ದರೋಡೆ ರಾಷ್ಟ್ರಮಟ್ಟದಲ್ಲಿ ಸಂಚಲ ರೂಪಿಸಿತ್ತು. ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಸಾಹಸ ಮೆಚ್ಚುವಂತಹದ್ದು. 6 ತಿಂಗಳಿOದ ದರೋಡೆಕೋರರು ಖತರ್ನಾಕ್ ಪ್ಲಾನ್ ರೂಪಿಸಿ ಸಹಕಾರಿ ಬ್ಯಾಂಕ್‌ನಿOದ 2,265 ಬಳೆ, ಓಲೆ, ಸರ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದರು. ತನಿಖೆ ವೇಳೆ ದರೋಡೆ ಮಾಡಲಾದ ಚಿನ್ನದ ರಾಶಿಯನ್ನು ಕಂಡು ಪೊಲೀಸರು ನಿಂತಲ್ಲೇ ದಂಗಾಗಿ ಹೋಗಿದ್ದಾರೆ.
ಸದ್ಯ ದರೋಡೆಕೋರರು 4 ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿOದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಜ್ಯದ ಅತ್ಯಂತ ದೊಡ್ಡ ಪ್ರಕರಣ ಭೇದಿಸಿರುವುದರ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿದ್ದು, ಬ್ಯಾಂಕ್‌ನಲ್ಲಿ ದರೋಡೆ ನಡೆಸಿದ ನಂತರ ಮುರುಗಂಡಿ ಥೇವರ್ ಹಾಗೂ ಯೊಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಕಡೆಗೆ ಪರಾರಿಯಾಗಿದ್ದರು. ಉಳಿದ 4 ಆರೋಪಿತರು ಮಂಗಳೂರು ರೈಲು ನಿಲ್ದಾಣಕ್ಕೆ ತೆರಳಿದ್ದರು. ಇವರಲ್ಲಿ ಮೂವರು ಆಟೋದಲ್ಲಿ ಮತ್ತು ಒಬ್ಬನು ಬಸ್ಸಿನಲ್ಲಿ ಪ್ರಯಾಣಿಸಿ ಎಸ್ಕೇಪ್ ಆಗಿದ್ದರು ಎಂದಿದ್ದಾರೆ.
ಮುರುಗOಡಿ ಮತ್ತು ತಂಡ ತಮಿಳುನಾಡಿಗೆ ಪರಾರಿಯಾಗಲು ಯೋಜಿಸಿದ್ದರು. ಅಲ್ಲದೇ ಇಲ್ಲಿ ದೋಚಿದ್ದ ಬಂಗಾರದ ಆಭರಣಗಳನ್ನು ಮುಂಬೈನ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ಲ್ಯಾನ್‌ನಲ್ಲಿ ಈ ಧಾರಾವಿ ಗ್ಯಾಂಗ್ ಇತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
೨೦೧೬ರಲ್ಲಿ ಮಹಾರಾಷ್ಟ್ರ ಜೈಲಿನಲ್ಲಿ ಕಣ್ಣನ್, ಮುರುಗನ್ ಪರಿಚಯವಾಗಿತ್ತು. ಈ ವೇಳೆ ಇಬ್ಬರಿಗೂ ಸ್ಥಳೀಯ ಶಶಿದೇವರ್ ಪರಿಯಚವಾಗಿತ್ತು. ಶಶಿದೇವರ್‌ನನ್ನು ಭೇಟಿಯಾಗಿ ಕೋಟೆಕಾರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ೨೦೨೪ರ ನ.೨೭ರಂದು ಮುರುಗನ್, ರಾಜೇಂದ್ರನ್ ಜೊತೆ ಮಂಗಳೂರಿಗೆ ಬಂದಿದ್ದ.
ಆಗ ಶಶಿದೇವರ್ ಇಲ್ಲಿ ಅವರಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದ. ಆಟೋದಲ್ಲಿ ಬ್ಯಾಂಕ್ ಬಳಿ ಕರೆದೊಯ್ದು ಮಾಹಿತಿ ನೀಡಿದ್ದ ಅದರಂತೆ ಬ್ಯಾಂಕ್ ದರೋಡೆಗೆ ಗ್ಯಾಂಗ್ ಸಂಚು ರೂಪಿಸಿತ್ತು. ಶುಕ್ರವಾರ ಮಸೀದಿ ಪ್ರಾರ್ಥನೆ ಹೊತ್ತಲ್ಲೇ ಮುಂಬೈನಿAದ ಫಿಯೇಟ್ ಕಾರಿನಲ್ಲಿ ಬಂದು ದರೋಡೆಗೆ ಚು ರೂಪಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದರು.