ಬೆಂಗಳೂರು: ರಾಜ್ಯ ಸರ್ಕಾರ ಇತ್ತಿಚೆಗೆ ಸಾರ್ವಜನಿ ಬಸ್ಗಳ ಪ್ರಯಾಣ ದರ ಶೇಕಡಾ 15ರಷ್ಟು ಏರಿಕೆ ಮಾಡಿದ ಬೆನ್ನಲ್ಲೆ ಬೆಂಗಳೂರು ಜನರಿತೆ ನೀರಿನ ದರ ಏರಿಕೆಗೆ ಶಾಕ್ ನೀಡಲಾಗಿದೆ. ಕಾವೇರಿ ಕುಡಿಯುವ ನಿರೀನ ದರವನ್ನು ಶೀಘ್ರವೇ ಹೆಚ್ಚಿಸಲಾಗುವುದು ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಜಲ ಮಂಡಳಿಯ ಬೆಲೆಯನ್ನು ಹೆಚ್ಚಿಸಿಲ್ಲ. ಕೊಳಗೇರಿ ನಿವಾಸಿಗಳಿಗೆ ಉಚಿತ ನೀರು ಪೂರೈಸಲು ಆಗದೆ ಅವರುಗಳ ಸ್ವಾಭಿಮಾನಕ್ಕೆ ಅಪಮಾನ ತರುವಂತಹ ರೀತಿಯ ಹೇಳಿಕೆ ನೀಡಬಾರದು. ಕಾವೇರಿ ನೀರಿನ ದರವನ್ನು ಹೆಚ್ಚಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಯಾವ ಕಾರಣಕ್ಕೆ ನೀರಿನ ದರ ಹೆಚ್ಚಿಸಲು ಬಿಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ, ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಎಎಪಿ ಪ್ರಕಟಣೆ ಹೊರಡಿಸಿದ್ದು, ಉಪಮುಖ್ಯಮಂತ್ರಿಗಳ ನೀರಿನ ದರ ಏರಿಕೆ ನೀರ್ಣಯ ಖಂಡಿಸಿದೆ. ಕಾವೇರಿ ನದಿಯಿಂದ ನಗರಕ್ಕೆ ಸರಬರಾಜು ಆಗುವ ನೀರಿನ ಪೈಪ್ ಲೈನ್ ಗಳಲ್ಲಿನ ಶೇಕಡಾ 35ರಷ್ಟು ನೀರು ಸೋರಿಕೆ ಆಗುತ್ತಿದೆ. ಈ ಬಗ್ಗೆ ಜಲಮಂಡಳಿಯೇ ಅಂದಾಜು ಮಾಡಿದೆ. ಇಂದಿಗೂ ಸಹ ನಷ್ಟು ಇದೆ ಎಂದು ಜಲಮಂಡಳಿಯೇ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸದಂ ಅವರು ಹೇಳಿದರು. ಸದ್ಯದ ಪರಿಸ್ಥಿತಿ ಹೀಗಿರುವಾಗ ದುರಸ್ತಿ ಕಾರ್ಯಗಳಿಗೆ ಪ್ರತಿವರ್ಷ ಜಲಮಂಡಳಿಯು ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿ ಜನತೆಯ ತೆರಿಗೆ ಹಣ ಯಾರ ಜೇಬಿಗೆ ಸೇರುತ್ತಿದೆ. ಎಲ್ ಅಂಡ್ ಟಿ ಕಂಪನಿ ಜಲ ಮಂಡಳಿಯ ಕಾಮಗಾರಿಯನ್ನು ತೆಗೆದುಕೊಳ್ಳದಿರುವ ಕಾರಣ ಏನು? ಎಂಬುದನ್ನು ಡಿ.ಕೆ. ಶಿವಕುಮಾರ್ ತಿಳಿಸಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ಪ್ರಕರಣ ತನಿಖೆಗೇಕೆ ನೀಡಿಲ್ಲ? ಈ ಹಿಂದಿನ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ 10,000 ಕೋಟಿ ರೂ.ಗಳನ್ನು ಖರ್ಚು ಮಾಡಿ ಹೊಸ ಪೈಪುಗಳನ್ನು ಅಳವಡಿಸಿದ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಗೊತ್ತಿದ್ದರೂ 40 % ಕಮಿಷನ್ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಡಿ.ಕೆ. ಶಿವಕುಮಾರ್ ಎಕೆ ಇನ್ನೂ ತನಿಖೆಗೆ ಆದೇಶವನ್ನು ನೀಡಿಲ್ಲ ಎಂದು ಕಿಡಿ ಕಾರಿದರು.
ಬೆಂಗಳೂರು ಜಲ ಮಂಡಳಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಪ್ರತಿ ವರ್ಷ ನಡೆಯುವ ಸಾವಿರಾರು ಕೋಟಿ ರೂ. ಗಳ ಭ್ರಷ್ಟಾಚಾರಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಾವೇರಿ ನೀರಿನ ಸೋರಿಕೆ ತಡೆಗಟ್ಟಿಲ್ಲ. ನೀರಿನ ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕಿಲ್ಲ. ಕೇವಲ ತಮ್ಮ ಸ್ವಾರ್ಥ ನೋಡಿಕೊಳ್ಳುತ್ತಿದ್ದಾರೆ. ಇದೀಗ ನೀರಿನ ದರ ಏರಿಕೆ ಮಾಡಲು ಸಜ್ಜಾಗಿದ್ದಾರೆ. ಇದರಿಂದ ಬೆಂಗಳೂರು ನಿವಾಸಿಗಳು ಆರ್ಥಿಕವಾಗಿ ತತ್ತರಿಸುವಂತಹ ಸ್ಥಿತಿಗೆ ತಲುಪುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರ ನೀರಿನ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಆಮ್ ಆದ್ಮಿ ಪಕ್ಷ ಈ ಬಗ್ಗೆ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.