ತುಮಕೂರು: 50 ವರ್ಷದ ಬಳಿಕ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ನಡೆದ ಮಧುಗಿರಿಯ (Madhugiri) ಚೋಳೇನಹಳ್ಳಿ (Cholenahalli) ಕೆರೆಯಲ್ಲಿ ಸಚಿವ ಕೆಎನ್ ರಾಜಣ್ಣ (KN Rajnna) ಬೋಟಿಂಗ್‌ನಲ್ಲಿ (Boating) ಜಾಲಿ ರೈಡ್ ಮಾಡಿದ್ದಾರೆ.
ಕೆರೆ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಹಿನ್ನೆಲೆಯಲ್ಲಿ ಬೋಟಿಂಗ್‌ಗೆ ರಾಜಣ್ಣ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಚೋಳೇನಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾದಾಗ ಕೆರೆ ಏರಿ ಹಾಗೂ ಹೂಳನ್ನು ಎತ್ತಿಸಲಾಗುವುದು. ಈ ಕೆರೆ ನೋಡಲು ಸುಂದರವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕೆರೆಯಲ್ಲಿ ಶಾಶ್ವತವಾಗಿ ದೋಣಿ ವಿಹಾರದ ವ್ಯವಸ್ಥೆ ಮಾಡಿಸಲಾಗುವುದು ಎಂದು ತಿಳಿಸಿದರು.
ಚೋಳೇನಹಳ್ಳಿ ಕೆರೆ ತುಂಬಿದ ಪ್ರತಿ ವರ್ಷದಲ್ಲಿ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಆಚರಿಸಲಾಗುವುದು. ಅದಕ್ಕಾಗಿ ಕೆರೆಯೊಳಗೆ ಶಾಶ್ವತವಾಗಿ ವೇದಿಕೆಗಳನ್ನು ನಿರ್ಮಿಸಲಾಗುವುದು ಎಂದರು.