ದಾವಣಗೆರೆ: ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ಸಾವನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಕೂಗಳತೆಯಲ್ಲಿ ಹರಿಯುವ ಭದ್ರಾ ನಾಲೆಯಲ್ಲಿ ಘಟನೆ ನಡೆದಿದೆ. ಕುರ್ಕಿ ಗ್ರಾಮದ ಪಾಂಡು ಹಾಗೂ ಯತೀಂದ್ರ ಮೃತಪಟ್ಟ ಮಕ್ಕಳೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೃತ ಮಕ್ಕಳಿಬ್ಬರು ದೂರದ ತುರ್ಚಘಟ್ಟ ಗ್ರಾಮದ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಸ್ನೇಹಿತರಾಗಿದ್ದು ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಕುರ್ಕಿ ಗ್ರಾಮದ ಮುಖ್ಯ ಕಾಲುವೆಯಲ್ಲಿ ಈಜಲು ಬಂದಿದ್ದರು. ಈ ವೇಳೆ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.