ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲು ಪ್ರತ್ಯೇಕ ರಸ್ತೆ ನಿರ್ಮಾಣ ಕಾಮಗಾರಿಯು ಅಂತಿಮ ಹಂತ ತಲುಪಿದೆ. ಈ ಹೊಸ ಸ್ಯಾಟಲೈಟ್ ಟೌನ್ ರಿಂಗ್ ರೋಡ್ನಿಂದಾಗಿ ತುಮಕೂರು, ಚೆನ್ನೈ ಸೇರಿದಂತೆ ವಿವಿಧ ಸ್ಥಳಗಳಿಂದ ಏರ್ಪೋರ್ಟ್ ಪ್ರವೇಶ ಸುಲಭವಾಗಲಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) ವಿಮಾನ ನಿಲ್ದಾಣವನ್ನು ತಲುಪಲು ಹಾಗೂ ಬೆಂಗಳೂರು ನಗರದ ರಸ್ತೆಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಗುರಿಯೊಂದಿಗೆ ಹೊಸ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಿರ್ಮಿಸುತ್ತಿದೆ. ಇದು ರಾಜ್ಯದ ನಾನಾ ಜಿಲ್ಲೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಪ್ರತ್ಯೇಕ ರಸ್ತೆಯಾಗಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. Experts views from Explore More ಈ ಹೊಸ ರಸ್ತೆಯು 155 ಕಿ.ಮೀ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಯೋಜನೆಯ ಭಾಗವಾಗಿದೆ. ಇದನ್ನು ಬೆಂಗಳೂರಿನ ಹೊರವಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯು ದೇವನಹಳ್ಳಿ ಬಳಿಯ ಬೂದಿಗೆರೆ ಕ್ರಾಸ್ನಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕವನ್ನು ಕಲ್ಪಿಸಲಿದೆ. ಇದು ಸ್ಥಳೀಯ ಪ್ರಯಾಣಿಕರಿಗೆ ಮಾತ್ರವಲ್ಲದೆ, ಚೆನ್ನೈ ಮತ್ತು ಆಂಧ್ರಪ್ರದೇಶಗಳಿಂದ ಪ್ರಯಾಣಿಸುವ ಕೈಗಾರಿಕಾ ವಾಹನಗಳಿಗೂ ಸಂಚಾರ ಸುಗಮಗೊಳಿಸಲಿದೆ. ಈಗ ಯಲಹಂಕದ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕವಿದೆ. ಈ ಹೊಸ ರಸ್ತೆ ಸಂಪರ್ಕವನ್ನು ಶುರುವಾದರೆ ಸಂಚಾರ ಸುಗಮಗೊಳಿಸುತ್ತದೆ. Also Read Bengaluru 2nd Airport: ಹೊಸೂರು ವಿಮಾನ ನಿಲ್ದಾಣ ನಿರ್ಮಾಣ: ಕೈಗಾರಿಕೆಗಳ ಹೊಸ ಡಿಮ್ಯಾಂಡ್! ಈವೆರೆಗೆ ಈ ಸ್ಯಾಟಲೈಟ್ ರಿಂಗ್ ರೋಡ್ನ 20 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೇವಲ 4.5 ಕಿಲೋಮೀಟರ್ ಮಾತ್ರ ಬಾಕಿ ಉಳಿದಿದ್ದು, ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ಪೂರ್ಣಗೊಂಡ ನಂತರ ಬೆಂಗಳೂರು ನಗರದ ಬಿಡುವಿಲ್ಲದ ಟ್ರಾಫಿಕ್ನಲ್ಲಿ ಸಿಲುಕದೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ರಾಜ್ಯ ಮತ್ತು ಹೊರ ರಾಜ್ಯಗಳ ವಾಹನಗಳಿಗೆ ಸುಗಮ ಪ್ರಯಾಣಕ್ಕೆ ಈ ಯೋಜನೆಯು ಸಹಕಾರಿಯಾಗಲಿದೆ. ಕೆಆರ್ಡಿಸಿಎಲ್ನಿಂದ ಅಭಿವೃದ್ಧಿಪಡಿಸಲಾಗುತ್ತಿರುವ ರಸ್ತೆಯು ಬೆಂಗಳೂರು-ಕೋಲಾರ ಹೆದ್ದಾರಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಮೂಲಕ ಹಾದು ಹೋಗುತ್ತಿದೆ. ಇದು ಪೂರ್ವ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಹೊಸಕೋಟೆ, ವೈಟ್ಫೀಲ್ಡ್, ಅತ್ತಿಬೆಲೆ, ಆನೇಕಲ್, ಕೆಆರ್.ಪುರ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರಮುಖ ಸ್ಥಳಗಳನ್ನು ಕೂಡ ಸಂಪರ್ಕಿಸುತ್ತದೆ. ತುಮಕೂರು ಹಾಗೂ ಇತರ ಹತ್ತಿರದ ಜಿಲ್ಲೆಗಳಿಂದ ಪ್ರಯಾಣಿಕರು ಈಗಿನಂತೆ ಬೆಂಗಳೂರು ನಗರ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೂದಿಗೆರೆಯನ್ನು ಸುಲಭವಾಗಿ ತಲುಪಬಹುದು. ಇದು ವಿಮಾನ ನಿಲ್ದಾಣಕ್ಕೆ ಸುಲಭ ಮಾರ್ಗವಾಗಲಿದೆ. 2018-19ರಲ್ಲಿ ಪ್ರಾರಂಭವಾದ ಎಸ್ಟಿಆರ್ಆರ್ ಯೋಜನೆಯು 2,200 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 155 ಕಿ.ಮೀ.ಗಳಲ್ಲಿ ಈಗಾಗಲೇ 125 ಕಿ.ಮೀ ಪೂರ್ಣಗೊಂಡಿದೆ. 2025ರ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ಭಾಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 20 ಕಿಲೋಮೀಟರ್ ರಸ್ತೆ ಕೂಡ ಪೂರ್ಣಗೊಂಡಿದೆ. ಬೆಟ್ಟಕೋಟೆ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಸುಮಾರು 1 ಕಿ.ಮೀ ದೂರದ ಸಣ್ಣ ಭಾಗಕ್ಕೆ ಪರ್ಯಾಯ ಮಾರ್ಗದ ಅಗತ್ಯವಿದ್ದು, ಮೈಲನಹಳ್ಳಿ, ಸಿಂಗನಹಳ್ಳಿ ಗ್ರಾಮಗಳ ಭೂಸ್ವಾಧೀನ ಬಾಕಿ ಉಳಿದಿದೆ. ಹಾಗಾಗಿ ಇನ್ನೂ 4.5 ಕಿ.ಮೀ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ.