ಮನುಷ್ಯನ ಸ್ವಾರ್ಥದ ಬದುಕು ಮನುಷ್ಯನನ್ನೆ ತೊಂದರೆಗೀಡು ಮಾಡುತ್ತದೆ. ಹೊಂದಾಣಿಕೆಯ ಮನೋಭಾವ, ಸಮಾನತೆ, ಸಹಬಾಳ್ವೆ, ಗೌರವ, ನಂಬಿಕೆ ಯಾರಲ್ಲಿಯೂ ಇಲ್ಲ ದಂತಾಗಿ ಮಕ್ಕಳಿಗೆ ತಂದೆ ತಾಯಿಯ ಮೇಲೆ ಗೌರವಾಧರಗಳೇ ಇಲ್ಲದಂತಾಗಿದೆ. ಅದಕ್ಕಾಗಿ ಪೋಷಕರು ತಮ್ಮ ಕುಟುಂಬದಲ್ಲಿ ಬೆರೆತು ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಹಬಾಳ್ವೆ, ಪ್ರೀತಿ, ವಿಶ್ವಾಸ ಗಳನ್ನು ಬೆಳೆಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕಿದೆ. ಮನುಷ್ಯ ಸ್ವಾರ್ಥ ಜೀವನಕ್ಕಾಗಿ ಪ್ರಕೃತಿಯನ್ನೆ ಹಾಳುಮಾಡುತ್ತಿದ್ದು, ಸ್ವಾರ್ಥದ ಫಲವಾಗಿ ಇಂದು ಪ್ರಕೃತಿ ಮುನಿದು ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗುತ್ತಿಲ್ಲ, ಅತಿವೃಷ್ಟಿ-ಅನಾವೃಷ್ಟಿನಾಡಿನಾದ್ಯಂತ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮನುಷ್ಯ ಸ್ವಾರ್ಥಪರ ಚಿಂತನೆ ಬಿಟ್ಟು ಪ್ರಕೃತಿಯಲ್ಲಿ ದೇವರನ್ನು ಕಾಣುವ ಮೂಲಕ ಉತ್ತಮ ಬದುಕನ್ನು ಕಂಡುಕೊಳ್ಳಬೇಕು ಎಂದರು.
ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಶ್ರೀ ಅಭಿನವಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಕಳರ ಪ್ರತಿಷ್ಠಾಪಿಸಿ ಮಾತನಾಡಿ ತಲೆಮಾರುಗಳಿಂದ ತಲೆಮಾರುಗಳಿಗೆ ದೇವಾಲಯಗಳ ಪುನರುಜ್ಜಿವನ ಕಾರ್ಯ ನಡೆಯಬೇಕಿದೆ. ಮಾನವನು ತನ್ನಲ್ಲಿರು ವಂತಹ ಧಾರ್ಮಿಕ ಚಿಂತನೆಗಳನ್ನು ಜಾಗೃತಗೊಳಿ ಸುವಂತಹ ಕಾರ್ಯವನ್ನು ಮಾಡಿದಾಗ ಸುಖ ಸಮಾಜದ ಕಲ್ಪನೆಯನ್ನು ಕಾಣಬಹುದಾಗಿದೆ ಎಂದರು.
ಗುರುಪರದೇಶಿಕೇAದ್ರ ಸ್ವಾಮೀಜಿ ಮಾತಾನಾಡಿ ಬದುಕಿನ ಜಂಜಾಟದ ನಡುವೆ ಶಾಂತಿ, ನೆಮ್ಮದಿ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದ್ದು ನೆಮ್ಮದಿಯಿಂದರಬೇಕಾದರೆ ಧರ್ಮದ ಮೂಲಕ ಮಾತ್ರ ಸಾಧ್ಯ.ಧರ್ಮ ಮಾರ್ಗದಲ್ಲಿ ನಡೆಯುವ ಪ್ರತಿ ಮನುಷ್ಯನಿಗೂ ಒಳ್ಳೆಯ ಫಲ ದೊರತೆ ದೊರೆಯುತ್ತದೆ. ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ವಿಕೃತಗೊಳಿಸುತ್ತಿರುವುದು ನೆನೆದರೆ ನೋವುಂಟಾಗುತ್ತದೆ. ಪ್ರತಿಯೊಂದು ಗ್ರಾಮಗಳಲ್ಲಿ ದೇವಾಲಯಗಳನ್ನು ರಕ್ಷಿಸಿ ಶ್ರದ್ಧಾ ಭಾವನೆಯಿಂದ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿದಲ್ಲಿ ಗ್ರಾಮಗಳ ಎಳಿಗೆ, ಒಗ್ಗಟ್ಟು ನಿರ್ಮಾಣವಾಗಿ ಗ್ರಾಮಗಳು ಸುಭಿಕ್ಷವಾಗಿರುತ್ತವೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಗೋಡೆಕೆರೆ ಸಂಸ್ಥಾನ ಮಠದ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯದೇಶಿಕೇAದ್ರ ಸ್ವಾಮೀಜಿ ಅವರಿಂದ ಪ್ರಾಣ ಪ್ರತಿಷ್ಟಾಪನೆ ಹಾಗೂ ವಟುಗಳಿಗೆ ದೀಕ್ಷೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಗ್ರಾಮಸ್ಥರು ಭಾಗವಹಿಸಿದ್ದರು.