ಬೆಂಗಳೂರು || ನಗರದಲ್ಲಿ ಇಂದಿನಿಂದ 11 ದಿನ ವಿದ್ಯುತ್ ಕಟ್, ಪ್ರದೇಶಗಳ ವಿವರ

ಬೆಂಗಳೂರು || ನಗರದಲ್ಲಿ ಇಂದಿನಿಂದ 11 ದಿನ ವಿದ್ಯುತ್ ಕಟ್, ಪ್ರದೇಶಗಳ ವಿವರ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಸಂಬಂಧ ನಗರದ ವಿವಿಧ ಪ್ರದೇಶಗಳಲ್ಲಿ ಮುಂದಿನ ಫೆಬ್ರವರಿ17ರವರೆಗೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಘೋಷಿಸಿದೆ. ಹಾಗಾದರೆ ಯಾವೆಲ್ಲ ಏರಿಯಾಗಳಲ್ಲಿ ನಿತ್ಯ ಎಷ್ಟು ಗಂಟೆ ಪವರ್ ಕಟ್ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ವಿದ್ಯುತ್ ವಿತರಣಾ ಉಪ ವಿಭಾಗದಲ್ಲಿ ಮೂಲ ಸೌಲಭ್ಯಗಳನ್ನು ನವೀಕರಿಸುತ್ತಿದೆ. ಅಟಲ್ ಭೂಜಲ್ ಯೋಜನೆಗೆ ಸಂಬಂಧಿಸಿದ ನಡೆಯುತ್ತಿರುವ ಕೆಲಸಗಳ ಪರಿಣಾಮವಾಗಿ ವಿದ್ಯುತ್ ಕಡಿತ ಉಂಟಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ವಿದ್ಯುತ್ ವ್ಯತ್ಯಯ ಬೆಂಗಳೂರಿನಲ್ಲಿ ನೆನ್ನೆ ಫೆಬ್ರವರಿ 6ರಿಂದ ಆರಂಭವಾಗಿದ್ದು ಫೆಬ್ರವರಿ 17 ರವರೆಗೆ ಪ್ರತಿ ದಿನವು ವಿದ್ಯುತ್ ಕಡಿತಗೊಳ್ಳಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆವರೆಗೆ ವಿದ್ಯುತ್ ಕಡಿಗೊಳ್ಳಲಿದೆ. ಕೆಲವು ಬಡಾವಣೆಗಳಲ್ಲಿ ವಿವಿಧ ದಿನಾಂಕಗಳಂದು ವಿದ್ಯತ್ ಕಡಿತಗೊಳ್ಳಲಿದೆ.

ಬೆಂಗಳೂರಿನ ಗುಬ್ಬಿ ಗೇಟ್, ಕುಂಟಮ್ಮನತೋಟ, ಗೋವಿಂದನಗರ, ಹೌಸಿಂಗ್ ಬೋರ್ಡ್, ದಿಟ್ಟೂರು, ಬಿಎಚ್. ಪಾಲಿ, ಹೊನ್ನೇನಹಳ್ಳಿ ರಸ್ತೆ ಮತ್ತು ಹಾರೋಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿವಿಧ ದಿನಾಂಕಗಳಾದಫೆಬ್ರವರಿ 6, 8, 10, 12, 14, 16 ಹಾಗೂ 18ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ಮತ್ತು ನಿರ್ವಾಣಿ ಬಡಾವಣೆ ಸೇರಿದಂತೆ ವಿವಿಧೆಡೆ ಇಂದು ಫೆಬ್ರವರಿ 7, 9, 11, 13, 15 ಹಾಗೂ 17ರಂದು ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ತುರ್ತು ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದಂತೆ ಬೆಸ್ಕಾಂ ಬಾಧಿತ ಪ್ರದೇಶಗಳಲ್ಲಿ ಎಂದಿನಂತೆ ವಿದ್ಯುತ್ ಸರಬರಾಜು ಮಾಡಲಾಗುವುದು. ವಿದ್ಯುತ್ ಕಡಿತದಿಂದ ಎದುರಾಗುವ ಪ್ರದೇಶಗಳ ಜನರು ಬೆಸ್ಕಾಂ ಜೊತೆಗೆ ಸಹಕರಿಸುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *