ದೊಡ್ಡೇರಿ: 2004 ರಲ್ಲಿ ನಾನು ನನ್ನ ರಾಜಕೀಯ ಏರುಪೇರುಗಳ ಮಧ್ಯೆ ಬೆಳ್ಳಾವಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ಹೋಬಳಿಯಲ್ಲಿ ಅತಿಹೆಚ್ಚು ಬಹುಮತವನ್ನು ಕೊಟ್ಟು ಆ ಮೂಲಕ ನನಗೆ ರಾಜಕೀಯದ ತಿರುವು ಸಿಕ್ಕಿದೆ. ನಾನು ವಿಧಾನಸಭೆಗೆ ಆಯ್ಕೆಯಾಗಲು ಈ ಹೋಬಳಿಯ ಮತದಾರ ಪ್ರಭುಗಳಾದ ನೀವುಗಳು ಕಾರಣ. ಈಗಲು ಸಹ ನಾನು ಶಾಸಕನಾಗಿ, ಸಚಿವನಾಗಿದ್ದೇನೆ ಎಂದರೆ 2004ರಲ್ಲಿ ನನ್ನನ್ನು ನೀವು ಆಯ್ಕೆ ಮಾಡಿದ ಹಿನ್ನೆಲೆ ಮುಖ್ಯವಾದುದು. ನಾನು ಇಂದು ನಿಮ್ಮ ಮುಂದೆ ನಿಂತು ಮಾತನಾಡಲು ಶಕ್ತಿಕೊಟ್ಟವರು ಬೆಳ್ಳಾವಿ ಕ್ಷೇತ್ರಕ್ಕೆ ಸೇರಿದ್ದ ದೊಡ್ಡೇರಿ ಹೋಬಳಿಯ ಮತದಾರರಾದ ನೀವುಗಳು ಎಂದು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಜಿಪಂ, ತಾಪಂ ಹಾಗೂ ಬಡವನಹಳ್ಳಿ ಗ್ರಾಪಂ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಕನಪನಾಯಕನಹಳ್ಳಿ – ಬಡವನಹಳ್ಳಿಯ ಸಿ.ಸಿ.ರಸ್ತೆಗೆ ಭೂಮಿಪೂಜೆ, ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ವಾಲಿಬಾಲ್ ಮತ್ತು ಶಟಲ್ ಕಾಕ್ ಕ್ರೀಡಾಂಗಣ, ಅಂಗನವಾಡಿ ಕೇಂದ್ರ ಮತ್ತು ನೂತನ ಗ್ರಾಪಂ ಕಟ್ಟಡದ ಭೂಮಿ ಪೂಜೆಯಲ್ಲಿ ಮಾತನಾಡಿದ ಅವರು ಯಾವುದೇ ರೀತಿಯ ಜಾತಿ ತಾರತಮ್ಯ, ಪಕ್ಷ ಭೇದ ಮಾಡದೆ ಎಲ್ಲಾ ಸಮುದಾಯದ ಬಡವರ ಪರವಾಗಿ ಕೆಲಸ ಮಾಡುವುದು ನನ್ನ ಅಭಿಲಾಷೆ. ಬಡವನಹಳ್ಳಿಗೆ ಮೊರಾರ್ಜಿ ದೇಸಾಯಿ ವಸತಿಶಾಲೆ, ಪ್ರಥಮ ದರ್ಜೆ ಕಾಲೇಜು, ಪೋಲಿಸ್ ಠಾಣೆ ಮೇಲ್ದರ್ಜೆಗೇರಿಸಿರುವುದು, ಪೋಲಿಸ್ ವಸತಿ ಗೃಹಗಳು, ಡಿಸಿಸಿ ಬ್ಯಾಂಕ್, ಪುಲಮಘಟ ಗ್ರಾಮಕ್ಕೆ ಎಂ.ವಿ.ವಿ. ಸ್ಟೇಷನ್, 16 ಸಾವಿರ ಮನೆಗಳ ವಿತರಣೆ ಮಾಡಲಾಗಿದೆ. ಈಗಲೂ ಸಹ ನಿವೇಶನ ಮತ್ತು ಮನೆಗಳಿಗೆ ಬೇಡಿಕೆ ಬಂದಿರುವುದರಿAದ ಈಗಾಗಲೇ ಎಲ್ಲಾ ಗ್ರಾಪಂ ಮಟ್ಟದಲ್ಲಿ ನಿವೇಶನ ಗುರುತಿಸಲು ಸೂಚನೆ ನೀಡಿದ್ದೇನೆ. ಆ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಮಾ. 15 ರೊಳಗೆ ಒಂದು ಸಾವಿರ ನಿವೇಶನಗಳನ್ನು ಹಂಚಲಾಗುವುದು ಎಂದರು.
ಶಿಕ್ಷಣಕ್ಕೆ ಶ್ರೀಮಂತಿಕೆ ನೀಡುವ ಶಕ್ತಿ ಇದೆ. ಆದ್ದರಿಂದ ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡದೆ ಉನ್ತತ ಶಿಕ್ಷಣ ಕೊಡಿಸಿ. ಸಿದ್ದರಾಮಯ್ಯನವರ ಸರ್ಕಾರದದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಈ ಭಾಗದ ಕೆರೆಗಳಾದ ಕೆ.ಟಿ.ಹಳ್ಳಿ. ಗೂಬಲಗುಟ್ಟೆ, ರಂಗನಪಾಳ್ಯ, ಗಿಡದಾಗಲಹಳ್ಳಿ, ರಂಗಾಪುರ, ದೊಡ್ಡೇರಿ, ರಂಟವಳಲು, ಬೆಲ್ಲದಮಡುಗು, ಗಿರೇಗೊಂಡನಹಳ್ಳಿ, ತಿಮ್ಮಲಾಪುರ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ರಾಜ್ಯ ಸರ್ಕಾರದಿಂದ 135 ಕೋಟಿ ರೂ. ಮಂಜೂರಾಗಿದೆ.
ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ 20. ಎಂ.ವಿ.ಎ. ವಿದ್ಯುತ್ ಪ್ರವರ್ತಕ ಅಳವಡಿಸಲಾಗುತ್ತಿದೆ. ಕವಣದಾಲ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗುವುದು. ಶಿರಾ, ಮಧುಗಿರಿಯ ಷತುಷ್ಪಥ ರಸ್ತೆ ಕಾಮಗಾರಿಯನ್ನು ಕೆಲವೆ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದರಲ್ಲದೆ, ಆವಿನ ಮಡುಗು, ರಂಗಾಪುರ ಗ್ರಾಮದ ವಿದ್ಯಾರ್ಥಿಗಳು ಬಡವನಹಳ್ಳಿ ಮತ್ತು ಮಧುಗಿರಿ ತಾಲ್ಲೂಕು ಕೇಂದ್ರಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ವಾಹನ ಸೌಕರ್ಯ ಮಾಡಿಸಿಕೊಡಬೇಕೆಂದು ಕೇಳಿದಾಗ ತಕ್ಷಣವೆ ಮಧುಗಿರಿ ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ತಿಳಿಸಿ, ತುರ್ತಾಗಿ ಬಸ್ ಬಿಡುವಂತೆ ಸಚಿವರು ಸೂಚಿಸಿದರು. ಬಡವನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಭಾನುಪ್ರಿಯ ನಾಗರಾಜು ಸಚಿವರಲ್ಲಿ ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದಾಗ, ಜಿ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾನದಂಡಗಳನ್ನು ಅನುಸರಿಸಿಕೊಂಡು ಮಾಡಿಕೊಡುವಂತೆ ಹೇಳಿದರು.
ಜಿ.ಪಂ. ಜಿ.ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾದಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶಿಲ್ದಾರ್ ಶಿರಿನ್ತಾಜ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ, ಮಧುಸೂದನ್, ಹೂವಿನ ಚೌಡಪ್ಪ, ಡಿ.ವೈ.ಎಸ್.ಪಿ. ಮಂಜುನಾಥ್, ಮುಖಂಡ ಓ.ಬಿ.ಸಿ.ನಾಗರಾಜು, ದೇವರಾe, ನಜೀರ್, ಜಯರಾಮಯ್ಯ, ಹೆಗ್ಗಡೆ, ಹನುಮಂತರಾಯಪ್ಪ, ಸಿರಿಯಪ್ಪ, ಗ್ರಾಪಂ ಸರ್ವಸದಸ್ಯರುಗಳು, ತಾಲ್ಲೂಕು, ಹೋಬಳಿ ವ್ಯಾಪ್ತಿಯ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೌಡಪ್ಪ, ಲೆಕ್ಕ ಸಹಾಯಕ ರಾಮಚಂದ್ರಪ್ಪ, ಕಾರ್ಯದರ್ಶಿ ಮಂಜುಳ, ಬಿಲ್ಕಲೆಕ್ಟರ್ ರಂಗಯ್ಯ, ಅನೇಕ ಕಾರ್ಯಕರ್ತರು, ಅಹವಾಲು ಸಲ್ಲಿಕೆಯ ಫಲಾನುಭವಿಗಳು ಇದ್ದರು.