ತುಮಕೂರು: ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಅವರಿಗೆ ಕೂದಲು ಬೆಳ್ಳಗೆ ಆಯಿತೇ ಹೊರತು, ಬುದ್ದಿ ಬೆಳೆಯಲಿಲ್ಲ ಎಂದು ಶಾಸಕ ಬಿ. ಸುರೇಶ್ ಗೌಡ ವಾಗ್ದಾಳಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ಮಾಜಿ ಶಾಸಕ ಗೌರಿಶಂಕರ್, ಮುರುಳೀಧರ ಹಾಲಪ್ಪ ಹಾಗೂ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ದ ವಾಗ್ದಾಳಿ ಮಾಡಿದ್ದರು. ತುಮಕೂರು ತಾಲೂಕಿನಲ್ಲಿ ತಲೆ ಎತ್ತುತ್ತಿರುವ ವಿಶ್ವವಿದ್ಯಾಲಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಮುರುಳೀಧರ ಹಾಲಪ್ಪ ಕೂಡ ಮಾತನಾಡಿದ್ದಾರೆ.
ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಮಾತನಾಡಿದ್ದೇನೆ. ವಿವಿ ನಿರ್ಮಾಣದ ವಿಚಾರ, ರಸ್ತೆ, ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದೇನೆ. ಹಾಲಪ್ಪ ಅವರಿಗೆ ಸಮಯ ಇದ್ದರೆ ಪತ್ರಿಕೆ ಓದಲಿ ಇಲ್ಲ ಅಸೆಂಬ್ಲಿಯಲ್ಲಿ ದಾಖಲೆ ಇರುತ್ತೆ ಹೋಗಿ ನೋಡಲಿ ಎಂದು ವಾಗ್ದಾಳಿ ಮಾಡಿದರು.