ಬೆಂಗಳೂರು: ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಇದೀಗ ಈ ಸಂಸ್ಥೆಯು ಉಚಿತ ಚಾಲನಾ ತರಬೇತಿ ನೀಡುವುದಕ್ಕಾಗಿ ಅರ್ಹ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹಾಗಾದರೆ, ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಎಂಟಿಸಿಯು ಉಚಿತ ಚಾಲನಾ ತರಬೇತಿ ನೀಡುವುದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಸ್ಸಿ, ಎಸ್ಪಿ (ಪರಿಶಿಷ್ಟ ಜಾತಿ ಉಪ ಯೋಜನೆ) ಹಾಗೂ ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನಗಳ ಉಚಿತ ಚಾಲನಾ ತರಬೇತಿಯನ್ನು ಹಮ್ಮಿಕೊಂಡಿದೆ.
ಲಘು ಮತ್ತು ಭಾರೀ ವಾಹನಗಳ ಉಚಿತ ಚಾಲನಾ ತರಬೇತಿಯ ವೇಳೆ ವಸತಿ ಸಹಿತ ಹಾಗೂ ವಸತಿ ರಹಿತ ಇರುತ್ತದೆ. ತರಬೇತಿ ಅವಶ್ಯಕತೆ ಇರುವವರು ಅರ್ಜಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿ ಮೊದಲ ಅವಕಾಶ ನೀಡಲಾಗುತ್ತದೆ. ವಸತಿ ಸಹಿತ ತರಬೇತಿ ವಸತಿ ಸೌಕರ್ಯ, ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ.
ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವರು 18 ವರ್ಷದಿಂದ 45 ವರ್ಷ ವಯಸ್ಸಿನ ಒಳಗಿನವರಾಗಿರಬೇಕು. ಭಾರೀ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವರು 20ರಿಂದ 45 ವರ್ಷದ ಒಳಗಿರಬೇಕು. ಜೊತೆಗೆ ಲಘು ವಾಹನ ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಆಗಿರಬೇಕು. ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, 5 ಪಾಸ್ ಪೋಟೋಗಳು, ಬಿಎಂಟಿಸಿಯ ಉಚಿತ ಚಾಲನಾ ತರಬೇತಿಗೆ ಅಭ್ಯರ್ಥಿಗಳು ಹಾಜರಾಗುವಾಗ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಹಾಜರು ಪಡಿಸಬೇಕು.
ಬೆಂಗಳೂರಿನ ವಡ್ಡರಹಳ್ಳಿ ತರಬೇತಿ ಕೇಂದ್ರಕ್ಕೆ ಹಾಜರಾಗುವ ವೇಳೆ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ನೀಡಿದಂತೆ ದಾಖಲೆಗಳ ಮೂಲ ಪ್ರತಿಗಳು ಅರ್ಜಿಯ ಪ್ರತಿ ಜೊತೆಗೆ ಇರಬೇಕು. ನೀವು ನೀಡಿರುವ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ತೆಗೆದುಕೊಂಡು ಹೋಗಿರಬೇಕು. ಅರ್ಜಿ ಸಲ್ಲಿಕೆ ಮಾಡಲು https://sevasindhuservices.karnataka.gov.in ವೆಬ್ ಸೈಟ್ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08022279954, 8792662816/8792662814 ಅಥವಾ http://www.mybmtc.gov.in ಭೇಟಿ ನೀಡಬಹುದಾಗಿದೆ.