ಬೆಂಗಳೂರು || ಹೆಚ್ಚಿದ ಅಧಿಕ ತಾಪಮಾನ: ಏರೋ ಇಂಡಿಯಾ ಪ್ರದರ್ಶನ ಸ್ಥಳ – ಸಮಯ ಬದಲಾಯಿಸಲು ಸಲಹೆ

ಬೆಂಗಳೂರು || ಹೆಚ್ಚಿದ ಅಧಿಕ ತಾಪಮಾನ: ಏರೋ ಇಂಡಿಯಾ ಪ್ರದರ್ಶನ ಸ್ಥಳ - ಸಮಯ ಬದಲಾಯಿಸಲು ಸಲಹೆ

ಬೆಂಗಳೂರು: ಏರೋ ಇಂಡಿಯಾವನ್ನು ಪ್ರದರ್ಶನವು ಸದ್ಯ ಏರ್ ಫೋರ್ಸ್ ಸ್ಟೇಷನ್ ಯಲಹಂಕದಲ್ಲಿ ನಡೆಯುತ್ತಿದೆ, ಆದರೆ ಮುಂದಿನ ಬಾರಿ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನು ಬೇರೆ ಸ್ಥಳಕ್ಕೆ ಶಿಫ್ಟ್ ಮಾಡಬೇಕು ಹಾಗೂ ಕಾರ್ಯಕ್ರಮವನ್ನು ಫೆಬ್ರವರಿ ಬದಲಿಗೆ ಡಿಸೆಂಬರ್ ನಲ್ಲಿ ಆಯೋಜಿಸುವಂತೆ ವಿವಿಧ ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯ ವ್ಯಕ್ತ ಪಡಿಸಿವೆ.

ಕೇಂದ್ರ ಗೃಹ ಮತ್ತು ಭೂ ವಿಜ್ಞಾನ ಸಚಿವಾಲಯಗಳ ಅಧೀನದಲ್ಲಿರುವ ವಿಪತ್ತು ನಿರ್ವಹಣೆಯ ಅಧಿಕಾರಿಗಳು ಮತ್ತು ರಾಜ್ಯ ಕಂದಾಯ, ಸಂಚಾರ ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು 2025ರ ಏರೋ ಇಂಡಿಯಾ ಕಾರ್ಯಕ್ರಮದ ಪರಿಶೀಲನೆ ನಡೆಸಿದರು, ಮುಖ್ಯವಾಗಿ AFSY ಹೊರಗೆ ಮತ್ತು ಒಳಗೆ ಟ್ರಾಫಿಕ್ ಚಾಕ್ ಮತ್ತು ಬ್ಲಾಕ್ ಪಾಯಿಂಟ್ಗಳು, ಆರೋಗ್ಯದ ಮೇಲೆ ಪರಿಣಾಮ ಬೀರುವ ಹವಾಮಾನ ಪರಿಸ್ಥಿತಿಗಳು ಹಾಗೂ ಪಾರ್ಕಿಂಗ್ ಪ್ರದೇಶ, ವೈಮಾನಿಕ ಪ್ರದರ್ಶನ ವೀಕ್ಷಣಾ ಪ್ರದೇಶ (ADVA), ಫುಡ್ ಕೋರ್ಟ್ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಏಜೆನ್ಸಿಗಳು ಸಲಹೆ ನೀಡಿವೆ.

ಬೆಂಗಳೂರು ನಗರದ ಅನಿಯಂತ್ರಿತ ಬೆಳವಣಿಗೆ ಮತ್ತು ಅದರ ಟ್ರಾಫಿಕ್ ಕಿರಿಕಿರಿ ಕಾರಣದಿಂದಾಗಿ ಏರ್ಶೋ ಆಯೋಜಿಸಲು ಇನ್ನು ಮುಂದೆ ಈ ಸ್ಥಳ ಸೂಕ್ತವಲ್ಲ ಎಂದು ತೋರಿಸಿದೆ. ವೈಮಾನಿಕ ಪ್ರದರ್ಶನದ ಎಲ್ಲಾ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ವರದಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಧಿಕೃತ ವಿಮರ್ಶೆಯ ವಿಭಾಗ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದೆ.

ಫೆಬ್ರವರಿ ಬದಲು ಡಿಸೆಂಬರ್ನಲ್ಲಿ ಏರ್ಶೋ ನಡೆಸಬಹುದೇ ಎಂದು ಸೂಚಿಸಲು ನಾವು ಯೋಚಿಸುತ್ತಿದ್ದೇವೆ. ಏರೇ ಶೋಗೆ ಆಕಾಶವು ಸ್ಷಷ್ಟವಾಗಿ ಕಾಣುವ ಅವಶ್ಯಕತೆಯಿದೆ ಎಂದು ಇನ್ನೊಬ್ಬ ಹಿರಿಯ ಸರ್ಕಾರಿ ತಿಳಿಸಿದ್ದಾರೆ.

ಆರಂಭದಲ್ಲಿ, ಸ್ಪಷ್ಟವಾದ ನೀಲಿ ಆಕಾಶ ಮತ್ತು ಅನುಕೂಲಕರ ಹವಾಮಾನದಿಂದಾಗಿ ಫೆಬ್ರವರಿಯನ್ನು ಏರ್ಶೋಗೆ ಸೂಕ್ತ ತಿಂಗಳು ಎಂದು ಆಯ್ಕೆ ಮಾಡಲಾಯಿತು. ಆದರೆ ವರ್ಷಗಳು ಕಳೆದಂತೆ, ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯಿಂದಾಗಿ, ಫೆಬ್ರವರಿಯಲ್ಲಿ ತಾಪಮಾನ ಹೆಚ್ಚು ಬಿಸಿಯಿರುತ್ತದೆ. ಹೀಗಾಗಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಅನೇಕ ಜನರು ದೂರುತ್ತಿದ್ದಾರೆ.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಅಥವಾ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 4 ರವರೆಗೆ ಆಕಾಶವು ಸ್ಪಷ್ಟವಾಗಿದ್ದಾಗ ಏರ್ ಶೋ ನಡೆಯುತ್ತದೆ. ಹೀಗಾಗಿ ಡಿಸೆಂಬರ್ನಲ್ಲೂ ಇದೇ ರೀತಿ ಮಾಡಬಹುದು’ ಎಂದರು.

ಏರೋ ಇಂಡಿಯಾ ನಂತರದ ಪರಿಶೀಲನಾ ಸಭೆಯಲ್ಲಿ ಈ ಸಲಹೆಯನ್ನು ಇರಿಸಲಾಗುವುದು, ಅದಕ್ಕೂ ಮೊದಲು, ಹಿಂದಿನ ವರ್ಷಗಳಲ್ಲಿ ಡಿಸೆಂಬರ್ನಲ್ಲಿ ತಾಪಮಾನ ಹೇಗಿತ್ತು ಎಂಬುದನ್ನು ರಾಜ್ಯ ಸರ್ಕಾರಿ ಸಂಸ್ಥೆಗಳು ಒಟ್ಟುಗೂಡಿಸಿ ಅಧ್ಯಯನ ಮಾಡುತ್ತಿವೆ.

ಈ ಋತುವಿನಲ್ಲಿ ಒಣ ಹುಲ್ಲನ್ನು ಸುಡುವ ಘಟನೆಗಳು ಸಹ ಹೆಚ್ಚಾಗುತ್ತಿವೆ, ಇದು ಅಸುರಕ್ಷಿತವಾಗಿದೆ ಎಂದು ಅವರು ಹೇಳಿದರು. ತಾಪಮಾನವು ಅಧಿಕವಾಗಿರುವುದರಿಂದ, ಹವಾಮಾನ ಶುಷ್ಕವಾಗಿರುತ್ತದೆ, ಹುಲ್ಲು ಒಣಗಿರುತ್ತದೆ ಇದು ದಹನಕ್ಕೆ ಸೂಕ್ತವಾದ ಇಂಧನವಾಗಿದೆ. ಎಷ್ಟೇ ಮುಂಜಾಗ್ರತೆ ವಹಿಸಿ ಒಣ ಹುಲ್ಲನ್ನು ತೆರವುಗೊಳಿಸಿದರೂ ಬೆಂಕಿ ಹೊತ್ತಿಕೊಂಡ ಸಣ್ಣಪುಟ್ಟ ಘಟನೆಗಳು ನಡೆದಿವೆ. ಈ ವರ್ಷ ಧೂಳಿನ ಜೊತೆಗೆ ಬಿರುಗಾಳಿ ಏರಿಕೆಯಾಗಿದೆ ಎಂದು ಅವರು ಹೇಳಿದರು.

Increased high temperature

ವೈಮಾನಿಕ ಪ್ರದರ್ಶನದಲ್ಲಿ ಬಿಸಿ ಮತ್ತು ಶುಷ್ಕ ಹವಾಮಾನದ ಕಾರಣ, ವೈಮಾನಿಕ ಪ್ರದರ್ಶನಗಳನ್ನು ಬಿಟ್ಟು ಅನೇಕ ವಿಸಿಟರ್ಸ್ ಸ್ಥಳದಿಂದ ನಿರ್ಗಮಿಸುತ್ತಿರುವುದು ಕಂಡುಬಂದಿತು. ನಾವು ಪ್ರದರ್ಶನವನ್ನು ನೋಡಲು ಟಿಕೆಟ್ ಖರೀದಿಸಿದ್ದೇವೆ. ಕೊನೆಯ ಬಾರಿ ನಾವು ADVA ವೀಕ್ಷಿಸಿದ್ದೇವು ಆಗ ತುಂಬಾ ಬಿಸಿಲು ಮತ್ತು ದೂಳು ಇತ್ತು, ಈ ಬಾರಿ ನಾವು ಮುಖ್ಯ ಪ್ರದರ್ಶನ ಪ್ರದೇಶಕ್ಕೆ ಬಂದಿದ್ದೇವೆ. ಇಲ್ಲಿ ಧೂಳಿಲ್ಲ, ಆದರೆ ವಿಪರೀತ ಬಿಸಿಲಿದೆ, ತಾಪಮಾನ ಸಹಿಸಲಾಗದೆ ನನ್ನ ಸಹೋದ್ಯೋಗಿಗಳು ಮತ್ತು ಕುಟುಂಬದ ಸದಸ್ಯರು ಪ್ರದರ್ಶನವನ್ನು ಮಧ್ಯದಲ್ಲಿಯೇ ತೊರೆಯಬೇಕಾಯಿತು ಎಂದು ಪ್ರದರ್ಶನದಲ್ಲಿದ್ದ ಭಾಗವಹಿಸಿದ್ದ ಸಂಚಿತ್ ಎಂಬುವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *