ತುಮಕೂರು || ಶ್ರೀ ಸಿದ್ದಗಂಗಾ ಜಾತ್ರೆಯಲ್ಲಿ ರಾಸುಗಳ ಜಾತ್ರೆ ಬಲು ಆಕರ್ಷಣೀಯ

ತುಮಕೂರು || ಶ್ರೀ ಸಿದ್ದಗಂಗಾ ಜಾತ್ರೆಯಲ್ಲಿ ರಾಸುಗಳ ಜಾತ್ರೆ ಬಲು ಆಕರ್ಷಣೀಯ

ಚನ್ನಬಸವ.ಎಂ ಕಿಟ್ಟದಾಳ್

ತುಮಕೂರು : ಸಿದ್ದಗಂಗಾಮಠದ ರಾಸುಗಳ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ರಾಸುಗಳು ಬರುತ್ತವೆ. ನೋಡಲು ಸುಂದರವಾದ ರಾಸು ಜೋಡಿಗಳಿಗೆ ಲಕ್ಷ ಲಕ್ಷ ಕೊಟ್ಟು ಖರೀದಿಸುವವರೂ ಇದ್ದಾರೆ. ಇಲ್ಲಿಗೆ ಮಾರಾಟ ಮಾಡಲು ಬರುವವರು ಅದೆಷ್ಟೋ ರೈತರು. ಅದೇ ರೀತಿ ಖರೀದಿ ಮಾಡಲು ಕೂಡ ಜನ ನಾನಾ ಭಾಗಗಳಿಂದ ಆಗಮಿಸುವುದು ಇಲ್ಲಿನ ವಿಶೇಷ.

ಪ್ರತಿ ವರ್ಷ ನಾವು ಸಿದ್ದಗಂಗಾ ಜಾತ್ರೆಯ ದನಗಳ ಪರಿಷೆಗೆ ಬರುತ್ತೇವೆ. ಕರ್ನಾಟಕದ ನಾನಾ ಭಾಗಗಳಿಂದ ರೈತರು ಇಲ್ಲಿ ರಾಸುಗಳನ್ನು ಖರೀದಿಸಲು ಬರುತ್ತಾರೆ. ನಮ್ಮ ರಾಸುಗಳಿಗೆ ಉತ್ತಮ ಬೆಲೆಯೂ ಇಲ್ಲಿ ಸಿಗುತ್ತದೆ. ಈ ಬಾರಿಯೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ರೈತರೊಬ್ಬರು ಹೇಳಿಕೊಂಡರು.

ಸಿದ್ದಗಂಗೆಯ ಕ್ಷೇತ್ರದಲ್ಲಿ ರಾಸುಗಳ ಜಾತ್ರೆ ನೋಡಲು ಮುಗಿಬಿದ್ದ ಜನತೆ. ರಾಜ್ಯದ ವಿವಿಧ ಮೂಲೆಗಳಿಂದ ರಾಸುಗಳನ್ನು ತಂದು ಮಾರಟಕ್ಕೆ ಮತ್ತು ಪ್ರದರ್ಶನಕ್ಕೆ ಇಟ್ಟಿರುವಂತಹದ್ದು. ರೈತರು ಒಂದು ವಾರದ ಮುಂಚಿತವಾಗಿಯೆ ಸಕಲ ಸಿದ್ಧತೆಗಳೊಂದಿಗೆ ಜಾತ್ರೆಗೆ ಬಂದಿದ್ದಾರೆ. 10 ದಿನಗಳಿಗೂ ಅಧಿಕವಾಗಿ ನಡೆಯುವ ಜಾತ್ರೆ ಮಹೋತ್ಸವದಲ್ಲಿ ರಾಸುಗಳದ್ದೇ ಕಾರು ಬಾರು.,

ಈ ಬಾರಿ ದೊಡ್ಡೇರಿ ತಳಿಯ ಹಸುಗಳು ಮತ್ತು ಹಳ್ಳಿಕಾರ್ ಹಸುಗಳದ್ದು ಅಬ್ಬರ ಜೋರು. ಒಂದು ಜೊತೆ ಹಸುಗಳ ಬೆಲೆ 2 ಲಕ್ಷದಿಂದ ಅರಂಭವಾಗಿದೆ.. ನಿತ್ಯ ರೈತರು ಹಸುಗಳನ್ನು ತೊಳೆದು ಸಿಂಗಾರ ಮಾಡಿ ಜಾತ್ರೆಗೆ ಬಂದು ಹೋಗುವ ಜನರ ಕಣ್ಮನಗಳು ಸೆಳೆಯುವಂತೆ ಮಾಡುತಿದ್ದಾರೆ. ಜಾತ್ರೆಯ ಮೆರುಗು ಒಂದೆಡೆಯಾದರೆ ರಾಸುಗಳ ಜಾತ್ರೆಯೇ ಒಂದು ಮೆರಗನ್ನು ಮೂಡಿಸುತ್ತಿದೆ.

ದೇಶದ ವಿವಿಧ ತಳಿಗಳು ಸಿದ್ದಗಂಗಾ ಜಾತ್ರೆಯಲ್ಲಿ ಪ್ರತ್ಯಕ್ಷ : ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲ ದೇಶದ ವಿವಿಧ ಮೂಲೆಗಳಿಂದಲೂ ಜಾತ್ರೆಗೆ ಬಂದಿವೆ. ಜನರ ಮನಸ್ಸನ್ನು ಮುದಗೊಳಿಸುವಂತಹ ಹಸುಗಳ ಕೂಡ ಬಂದಿವೆ.

ರಾಸು ಅವಾಭಾವಗಳನ್ನು ಪ್ರದರ್ಶಿಸುತ್ತಾರೆ. ಬಣ್ಣಗಳನ್ನು ರಾಸುಗಳಿಗೆ ಬಳಿದು ಅವುಗಳ ಕೊಂಬುಗಳಿಗೆ ಸಿಂಗಾರದ ಆಭರಣಗಳನ್ನು ತೊಡಿಸಿ ಜನರ ಗಮನ ಸೆಳೆಯುತ್ತಾರೆ. ಇದರ ಜೊತೆಗೆ ರಾಸುಗಳನ್ನು ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನದಲ್ಲಿ ಹೈನುಗಾರಿಕೆ ಇಲಾಖೆಯಿಂದ ವಿವಿಧ ತಳಿಗಳನ್ನು ಪರಿಚಯಿಸಲಾಗುತ್ತಿದೆ.

Leave a Reply

Your email address will not be published. Required fields are marked *