ಬೆಂಗಳೂರು: ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಹಾಗೂ ನಮ್ಮ ರಾಜ್ಯ ಸರ್ಕಾರಿ ಬಸ್ಸುಗಳಿಗೆ ಹಾನಿ ಮಾಡಿರುವ ಎಂಇಎಸ್ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಅಗ್ರಹಿಸಿ ಪ್ರತಿಭಟನೆ ಹಾಗೂ ಪ್ರತಿಕೃತಿ ದಹನ ನಡೆಸಿರುವ ಬಗ್ಗೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಗೂಂಡಾಗಳು ಕೆಎಸ್ಆರ್ಟಿಸಿ ಚಾಲಕರ ಮೇಲೆ ನಡೆಸಿರುವ ಹಲ್ಲೆ ಹಾಗೂ ಬಸ್ ಮೇಲೆ ಕಪ್ಪುಮಸಿ ಬಳೆದು ಹಾನಿ ಉಂಟು ಮಾಡಿರುವುದನ್ನ ಖಂಡಿಸಿ ಕೂಡಲೇ ಗೂಂಡಾಗಳನ್ನು ಬಂಧಿಸಬೇಕು ಹಾಗೂ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು,
ಕರ್ನಾಟಕದ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಮೂಲಕ ಎಂಇಎಸ್ ನ ಗೂಂಡಗಳು ಉದ್ದೇಶಪೂರ್ವಕವಾಗಿ ನಮ್ಮ ಕೆಎಸ್ಆರ್ಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಕೆಲವು ಬಸ್ ಗಳಿಗೆ ಕಪ್ಪುಮಸಿಯನ್ನು ಬಳಿದಿದ್ದಾರೆ ನಾವು ಮಸಿ ಬಳಿಯಲೂ ಪ್ರಾರಂಭ ಮಾಡಿದರೇ ಎಂಇಎಸ್ ನ ಪುಂಡರುಗಳು ರಾಜ್ಯದಲ್ಲಿ ಎಲ್ಲೂ ನೆಲೆಯೂರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನಾವು ನೀಡುತ್ತಿದ್ದೇವೆ,
ಕರ್ನಾಟಕದಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಾಗೂ ಸರ್ಕಾರಿ ಸಿಬ್ಬಂದಿಗಳ ಮೇಲೆ ಈ ರೀತಿಯ ಗೂಂಡಾ ವರ್ತನೆ ಮಾಡಿದರೆ ಮಹಾರಾಷ್ಟ್ರದ ಏಕೀಕರಣದ ಸದಸ್ಯರಿಗೆ ಕರ್ನಾಟಕದಲ್ಲಿ ಇರಲು ಬಿಡುವುದಿಲ್ಲ ಎಂಬುದನ್ನು ಈ ಮೂಲಕ ಎಚ್ಚರಿಸುತ್ತ ಕೂಡಲೇ ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಈ ಮೂಲಕ ಪೊಲೀಸ್ ಇಲಾಖೆಯನ್ನ ಆಗ್ರಹ ಪಡಿಸಲಾಯಿತು,
ಕನ್ನಡಿಗರ ವಿರುದ್ಧ ಅವೇಳನಕಾರಿ ಹೇಳಿಕೆ ನೀಡಿರುವ ಎಂಇಎಸ್ ನ ಪುಂಡನಾಯಕ ಶುಭಂ ಶಳಕೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಅವನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಲಾಯಿತು
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಂಇಐ ಅಧ್ಯಕ್ಷರಾದ ಎಸ್.ಮನೋಹರ್ , ಮುಖಂಡರಾದ ಎ.ಆನಂದ್ , ಹೇಮರಾಜ್ , ಎಂ ರಾಜು , ಕೆ.ಟಿ ನವೀನ್ ಚಂದ್ರ , ಉಮೇಶ್ , ಚಿನ್ನಿ ಪ್ರಕಾಶ್, ಸುಂಕದಕಟ್ಟೆ ನವೀನ್ , ಕುಶಾಲ್ ಹರುವೇಗೌಡ, ಉಮೇಶ್ , ಚಂದ್ರಶೇಖರ್ , ಓಬಳೇಶ್ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.