ಬೆಂಗಳೂರು || ಬಸವಣ್ಣರವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿ ವರ್ಷಗಳೇ ಕಳೆದವು. ಲೋಕಾರ್ಪಣೆಯ ಬಗ್ಗೆ ಮುನ್ಸೂಚನೆಗಳು ಕಾಣುತ್ತಿಲ್ಲ.

ಬೆಂಗಳೂರು || ಬಸವಣ್ಣರವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿ ವರ್ಷಗಳೇ ಕಳೆದವು. ಲೋಕಾರ್ಪಣೆಯ ಬಗ್ಗೆ ಮುನ್ಸೂಚನೆಗಳು ಕಾಣುತ್ತಿಲ್ಲ.

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ವಿಶ್ವಗುರು, ಜಗಜ್ಯೋತಿ ಬಸವಣ್ಣರವರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವುದರ ಮತ್ತು ಆ ಸ್ಥಳದಲ್ಲಿ ನಡೆಯುತ್ತಿರುವ ಹೇಯ ಕೃತ್ಯಗಳ ಕುರಿತು

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ಬಿಂದುವಾಗಿರುವ, ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ, ನವರಂಗ ಚಿತ್ರ ಮಂದಿರದ ಹತ್ತಿರವಿರುವ ಮೇಲ್ ಸೇತುವೆಯ ಬಳಿ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ವಿಶ್ವಗುರು. ಜಗಜ್ಯೋತಿ ಬಸವಣ್ಣರವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿ ವರ್ಷಗಳೇ ಕಳೆದವು. ಅದರಂತೆ ಪುತ್ಥಳಿಯನ್ನು ತಂದಿರಿಸಿ ವರ್ಷಗಳೇ ಕಳೆದವು. ಆದರೆ ಲೋಕಾರ್ಪಣೆಯ ಬಗ್ಗೆ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ.

ಪುತ್ಥಳಿಯ ಲೋಕಾರ್ಪಣೆ ಕೆಲಸಗಳು ಸುಮಾರು ವರ್ಷಗಳಿಂದ ಮಂದಗತಿಯಲ್ಲಿ ಸಾಗಿ, ಪೂರ್ತಿ ಅಲ್ಲದಿದ್ದರೂ ಒಂದು ಹಂತಕ್ಕೆ ಮುಗಿದಿದ್ದು ಉದ್ಘಾಟನೆ ಮಾಡುವ ಸಮಯಕ್ಕಾಗಿ ವರ್ಷಗಳಿಂದ ಕಾಯುತ್ತಿದೆ. ಆದರೆ ಈಗ, ಯಾವುದೇ ಕೆಲಸಗಳೂ ಸಹ ನಡೆಯುತ್ತಿಲ್ಲ. ಈ ವಿಷಯಕ್ಕೆ ಪುಷ್ಟಿ ಕೊಡುವಂತೆ ಪುತ್ಥಳಿಗೆ ಹೊದಿಸಿರುವ ಬಟ್ಟೆಗಳೆಲ್ಲವೂ ಹರಿದು ಬಸವಣ್ಣರವರ ಮುಖ ಮಾತ್ರ ಮುಚ್ಚಿಕೊಂಡಿರುತ್ತದೆ.

ದೇಶ ವಿದೇಶಗಳೂ ಸೇರಿದಂತೆ, ಕೋಟ್ಯಾಂತರ ಭಕ್ತ ಸಮೂಹ ಹೊಂದಿರುವ, ಪ್ರತಿಯೊಬ್ಬರ ಮನೆ-ಮನಗಳಲ್ಲಿ ಭಕ್ತಿಯಿಂದ ಪೂಜಿಸಲ್ಪಡುವ, ಗೌರವಿಸಲ್ಪಡುವ, ಅರಿವೇ ಗುರು, ಕಾಯಕವೇ ಕೈಲಾಸ ಎಂದು ತಿಳಿಸಿದ ವಿಶ್ವಗುರು ಬಸವಣ್ಣರವರ ಪುತ್ಥಳಿಯು ಅನೇಕ ವರ್ಷಗಳೇ ಕಳೆದರೂ ಲೋಕಾರ್ಪಣೆಯಾಗದಿರುವುದು ಸಮಾಜಕ್ಕೆ ಆತಂಕ ತರುವಂತಹ ವಿಷಯವಾಗಿರುತ್ತದೆ.

ಬಹಳ ನೋವಿನ ಮತ್ತು ವಿಷಾದದ ಸಂಗತಿ ಎಂದರೆ ಈಗ, ಬಸವಣ್ಯರವರ ಪುತ್ಥಳಿಯು ಪೂರ್ತಿಯಾಗಿ ಮಾಸಿ, ಅಲ್ಲಲ್ಲಿ ಬಿರುಕು ಬಿಟ್ಟು ಕೊಂಡಿದೆ.  ಬಸವಣ್ಯರವರ ಪುತ್ಥಳಿ ಇರಿಸಿರುವ ಸ್ಥಳವು ಕುಡುಕರ, ಧೂಮಪಾನ ಮಾಡುವವರ, ಮೈಗಳ್ಳರ ಮತ್ತು ದಾರಿ ಹೋಕರ ತಂಗು ದಾಣವಾಗಿದೆ . ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೇಯ ಕೃತ್ಯಗಳನ್ನು ಎಸಗುವವರ, ಅನೈತಿಕ, ಅಕ್ರಮ ಚಟುವಟಿಕೆ ನಡೆಸುವವರ ಬಿಡದಿ ಮನೆಯಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.

ಈ ದಿನ ನಾವುಗಳೆಲ್ಲರೂ ಸೇರಿ ಸ್ಥಳವನ್ನು ಸ್ವಚ್ಛಗೊಳಿಸಿ. ಬಟ್ಟೆಗಳನ್ನು ತಂದು ಪುತ್ತಳಿಗೆ ಹೊದಿಸುವ ಕೆಲಸವನ್ನು ನಮ್ಮ ಸ್ವಂತ ಖರ್ಚಿನಿಂದ ಮಾಡಿರುತ್ತೇವೆ ಎಂದು ಶ್ರೀ ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್ ನ  ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರ್ ಟಿ. ಎಂ  ತಿಳಿಸಿದರು.

ಇದನ್ನು  ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಯಾವುದೇ ವಿಳಂಬ ಮಾಡದೇ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವುದಕ್ಕೆ ಸ್ಥಳವನ್ನು ಶುಚಿಗೊಳಿಸಿ, ಪ್ರತಿಮೆಯ ಮುಂದೆ ಹೋಗಿರುವ ತಂತಿಗಳನ್ನೆಲ್ಲ ತೆರವುಗೊಳಿಸಿ, ಯಾವುದೇ ವಾಣಿಜ್ಯ ವ್ಯಾಪಾರಕ್ಕೆ ಹಾಗು ವ್ಯಾಪಾರಸ್ಥ ವಾಹನಗಳನ್ನು ನಿಲ್ಲಿಸಲು ಅನುಮತಿ ನೀಡದೆ, ಸುತ್ತಲೂ ಹೂ ಕುಂಡಗಳನ್ನು ಇರಿಸಿ, ಜಾಗರೂಕತೆಯಿಂದ ನೋಡಿಕೊಳ್ಳಲು ಕಾವಲುಗಾರ ಸಿಬ್ಬಂಧಿಯನ್ನು ನೇಮಿಸುವಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೂ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು

ಇದಕ್ಕೆ ಸಂಬಂಧಪಟ್ಟಂತೆ ಸರಕಾರಕ್ಕೂ, ರಾಜಾಜಿನಗರ ವಿಧಾನಸಭಾ ಶಾಸಕರಿಗೂ, ಬೆಂಗಳೂರು ಕೇಂದ್ರ ಸಂಸತ್ತಿನ ಸದಸ್ಯರಿಗೂ ಹಾಗು ಇತರೆ ಇಲಾಖೆಗಳಿಗೂ ಮತ್ತು ಅಧಿಕಾರಿಗಳಿಗೂ ಹಾಗು ಪರಮ ಪೂಜ್ಯರುಗಳಿಗೂ ಸಹ ಮನವಿಯನ್ನು ಸಲ್ಲಿಸಿರುತ್ತಾರೆ .

ಶ್ರೀ ಸಿದ್ದಗಂಗಾ ಚಾರಿಟಬಲ್ ಟ್ರಸ್ಟ್ (ನೋಂ) ಬಳಗವು, ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ವಿಶ್ವಗುರು ಬಸವಣ್ಯರವರ ಹಾಗು ಕಾಯಕ ಯೋಗಿ, ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ||ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಯಾವುದೇ ಕಾರ್ಯಕ್ರಮಗಳಾಗಲಿ, ಧಾರ್ಮಿಕ ಪ್ರಚಾರವಾಗಲಿ, ಅಥವಾ ಸಂಘಟನೆಯಾಗಲಿ ಸದಾ ಕೈಜೋಡಿಸುತ್ತದೆ ಮತ್ತು ಬಸವ ಪರ ಚಿಂತಕರೊಂದಿಗೆ, ಸದಾ ನಿಲ್ಲುತ್ತದೆ ಎಂದು ತಿಳಿಸಲು ಬಯಸುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *