ದಕ್ಷಿಣ ಕನ್ನಡ || ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲಿ ಸೋನಲ್-ತರುಣ್ ದಂಪತಿ

ದಕ್ಷಿಣ ಕನ್ನಡ || ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲಿ ಸೋನಲ್-ತರುಣ್ ದಂಪತಿ

ದಕ್ಷಿಣ ಕನ್ನಡ : ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಕಳೆದ ವರ್ಷ ವಿವಾಹ ಆದರು. ಈಗ ಸಿನಿಮಾ ಕೆಲಸಗಳ ಜೊತೆ ಇವರು ವೈಯಕ್ತಿಕ ಜೀವನಕ್ಕೂ ಸಮಯ ನೀಡುತ್ತಾ ಇದ್ದಾರೆ. ಈಗ ತರುಣ್ ಹಾಗೂ ಸೋನಲ್ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ ತರುಣ್ ಹಾಗೂ ಸೋನಲ್. ಈ ಫೋಟೋಗಳನ್ನು ಸೋನಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಫೋಟೋಗೆ ಭರ್ಜರಿ ಲೈಕ್ಸ್ ಕೂಡ ಸಿಕ್ಕಿದೆ.

ತರುಣ್ ಹಾಗೂ ಸೋನಲ್ ಅವರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದವರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಕಳೆದ ವರ್ಷ ಈ ಪ್ರೀತಿಗೆ ದಂಪತಿ ಹೊಸ ಅರ್ಥವನ್ನು ನೀಡಿದರು. ಇವರು ಮದುವೆ ಆಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

ತರುಣ್ ಹಾಗೂ ಸೋನಲ್ ಅವರು ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದರು. ಅಲ್ಲಿ ಕ್ವಾಲಿಟಿ ಟೈಮ್ ಕಳೆದು ಬಂದಿದ್ದಾರೆ. ಮಾಲ್ಡೀವ್ಸ್ ಹೋಗಬೇಕು ಎಂಬುದು ತರುಣ್ ಕನಸಾಗಿತ್ತು. ಇದರ ಜೊತೆಗೆ ಅವರು ದೇವಸ್ಥಾನಗಳಿಗೂ ಭೇಟಿ ಕೊಡುತ್ತಾ ಇದ್ದಾರೆ

Leave a Reply

Your email address will not be published. Required fields are marked *