ಬೆಂಗಳೂರು || ಕರ್ನಾಟಕದಲ್ಲಿ ಹೋಳಿ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆ

ಬೆಂಗಳೂರು-ಮೈಸೂರು ಮೆಮು ರೈಲು: ಪ್ರಯಾಣಿಕರ ಬೇಡಿಕೆಗಳು

ಬೆಂಗಳೂರು: ರಾಜ್ಯಾದ್ಯಂತ ಇದೇ ಮಾರ್ಚ್ 13 ಮತ್ತು 14ರಂದು ಕಾಮನ ದಹನ (ಹೋಳಿ ಹಬ್ಬ) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂಬಂಧ ಊರುಗಳಿಗೆ ಹೋಗುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಈ ಮಾರ್ಗದಲ್ಲಿನ ವಿಶೇಷ ರೈಲುಗಳ ಸೇವೆ ವಿಸ್ತರಣೆ ಮಾಡಿದೆ. ಪ್ರಯಾಣಿಕರಿಗಾಗಿ ಹೆಚ್ಚುವರಿ ಟ್ರಿಪ್ ಹೊಡೆಯಲು ನಿರ್ಧರಿಸಿದೆ.

ಹೋಳಿ ಹಬ್ಬದ ಪ್ರಯುಕ್ತ ಮೈಸೂರು-ದಾನಾಪುರ ನಡುವಿನ ರೈಲು ಸೇವೆಗಳ ವಿಸ್ತರಣೆ ಆಗಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮೈಸೂರು ಮತ್ತು ದಾನಾಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಎರಡು ಟ್ರಿಪ್ಗಳಿಗೆ ಹೊಡೆಯುವುದಾಗಿ ರೈಲ್ವೆ ಮಂಡಳಿ ಖುಷಿ ಸುದ್ದಿ ನೀಡಿದೆ. ಹಾಗಾದರೆ ಯಾವೆಲ್ಲ ರೈಲುಗಳ ಸೇವೆ ವಿಸ್ತರಣೆ ಆಗಿದೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.

* ಮೈಸೂರು-ದಾನಾಪುರ ಎಕ್ಸ್ಪ್ರೆಸ್ ವಿಶೇಷ ರೈಲು (ಸಂಖ್ಯೆ 06207) ಮಾರ್ಚ್ 08ರಂದು ಮತ್ತು ಮಾರ್ಚ್ 15 (ಶನಿವಾರ) ರಂದು ಸಂಜೆ 4:30 ಕ್ಕೆ ಮೈಸೂರಿನಿಂದ ಹೊರಟು ಮಂಗಳವಾರ ಬೆಳಗ್ಗೆ 10:00 ಗಂಟೆಗೆ ದಾನಾಪುರ ತಲುಪುತ್ತದೆ.

* ದಾನಾಪುರ-ಮೈಸೂರು ಎಕ್ಸ್ಪ್ರೆಸ್ ವಿಶೇಷ ರೈಲು ಸಂಖ್ಯೆ (06208) ಮಾರ್ಚ್ 12 ಹಾಗೂ ಮಾರ್ಚ್ 19ರಂದು (ಬುಧವಾರ) ಬೆಳಗ್ಗೆ 1:45 ಕ್ಕೆ ದಾನಾಪುರ ರೈಲು ನಿಲ್ದಾಣದಿಂದ ಹೊರಟು ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಮೈಸೂರಿಗೆ ಬಂದು ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೈಲುಗಳ ನಿಲುಗಡೆ ವಿವರ ಈ ವೀಶೇಷ ರೈಲುಗಳ ಹೆಚ್ಚುವರಿ ಟ್ರಿಪ್ ವೇಳೆ ಎರಡೂ ದಿಕ್ಕುಗಳಲ್ಲಿ ‘ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ, ಕೊಪ್ಪಳ, ಗದಗ, ಎಸ್ಎಸ್ಎಸ್, ಹುಬ್ಬಳ್ಳಿ, ಬಾಗಲ, ಎಸ್ಎಸ್ಎಸ್ ಹುಬ್ಬಳ್ಳಿ ಬಾಗಲ್.

ಕುರ್ದುವಾಡಿ, ದೌಂಡ್, ಅಹ್ಮದ್ನಗರ, ಕೋಪರ್ಗಾಂವ್, ಮನ್ಮಾದ್, ಭೂಸಾವಲ್, ಖಂಡ್ವಾ, ತಲ್ವಾದ್ಯ, ಛನೇರಾ, ಖಿರ್ಕಿಯಾ, ಹರ್ದಾ, ಬಾಣಾಪುರ, ಇಟಾರ್ಸಿ, ಪಿಪಾರಿಯಾ, ನರಸಿಂಗ್ಪುರ್, ಜಬಲ್ಪುರ್, ಕಾಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛೋಕಿ, ಚುನಾ, ಮಿರ್ಜಾಪುರ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಆರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

10 ಎಸಿ 3 ಟೈರ್ ಕೋಚ್ ಈ ರೈಲುಗಳು 10 ಎಸಿ-3 ಟೈಯರ್ ಕೋಚ್ಗಳು, 6 ಎರಡನೇ ದರ್ಜೆಯ ಸ್ಲೀಪರ್ ಕೋಚ್ಗಳು, 4 ಸಾಮಾನ್ಯ ಎರಡನೇ ದರ್ಜೆಯ ಕೋಚ್ಗಳು ಮತ್ತು 2 ಲಗೇಜ್-ಕಮ್-ಗಾರ್ಡ್ ಕೋಚ್ಗಳು ಸೇರಿ ಒಟ್ಟು 22 ಎಲ್ಎಚ್ಬಿ ಕೋಚ್ಗಳನ್ನು ಒಳಗೊಂಡಿದೆ. ಇದೆಲ್ಲವು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುತ್ತವೆ. ಪ್ರಯಾಣಿಕರು ಈ ವಿಶೇಷ ರೈಲುಗಳು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ (www.enquiry.indianrail.gov.in) ಭೇಟಿ ನೀಡಬೇಕು. ಇಲ್ಲವೇ IRCTC ಆಪ್ ಬಳಸಿ ನೋಡಬಹುದು. ಇಲ್ಲವೇ 139 ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಂದೂಗಳು ಸೇರಿದಂತೆ ಬಹುತೇಕ ಎಲ್ಲ ಧರ್ಮಿಯರು ಈ ಪವಿತ್ರ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಹಬ್ಬಕ್ಕಾಗಿಯೇ ಸೇರುತ್ತಾರೆ. ಈ ವೇಳೆ ಊರುಗಳಿಗೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಸಾರಿಗೆ ಒದಗಿಸುವ ಉದ್ದೇಶದಿಂದ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *