ಬೆಂಗಳೂರು || ವಕೀಲೆ ಜೀವಾ ಆತ್ಮ*ತ್ಯೆ ಪ್ರಕರಣ; ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ

ಬೆಂಗಳೂರು || ವಕೀಲೆ ಜೀವಾ ಆತ್ಮ*ತ್ಯೆ ಪ್ರಕರಣ; ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ

ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಮಂಗಳವಾರ ಬಂಧಿಸಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ವಕೀಲೆ ಜೀವಾ ಡೆತ್ನೋಟ್ನಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ವಿರುದ್ಧ ಕಿರುಕುಳ ಮತ್ತು ಲಂಚದ ಆರೋಪ ಮಾಡಿದ್ದರು. ಘಟನೆ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಇದೀಗ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

ಬೆಂಗಳೂರಿನ ಬನಶಂಕರಿ ನಗರದ ರಾಘವೇಂದ್ರ ಲೇಔಟ್ನ ಮನೆಯೊಂದರಲ್ಲಿ ವಾಸವಿದ್ದ ವಕೀಲೆ ಜೀವಾ, ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೀವಾ ಬರೆದಿದ್ದ ಡೆತ್ ನೋಟ್ ಆಧರಿಸಿ ಅವರ ಸಹೋದರಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು, ಆದರೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು, ಬಳಿಕ ಹೈಕೋರ್ಟ್ ಪ್ರಕರಣದ ತನಿಖೆ ನಡೆಸಲು ಸಿಬಿಐ ಅಧಿಕಾರಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು.

ಬೆಂಗಳೂರಿನ ಬನಶಂಕರಿ ನಗರದ ರಾಘವೇಂದ್ರ ಲೇಔಟ್ನ ಮನೆಯೊಂದರಲ್ಲಿ ವಾಸವಿದ್ದ ವಕೀಲೆ ಜೀವಾ, ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೀವಾ ಬರೆದಿದ್ದ ಡೆತ್ ನೋಟ್ ಆಧರಿಸಿ ಅವರ ಸಹೋದರಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು, ಆದರೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು, ಬಳಿಕ ಹೈಕೋರ್ಟ್ ಪ್ರಕರಣದ ತನಿಖೆ ನಡೆಸಲು ಸಿಬಿಐ ಅಧಿಕಾರಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು.

ಪ್ರಕರಣದ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್ಐಟಿ ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು, ಮಂಗಳವಾರ ಕನಕಲಕ್ಷ್ಮಿ ವಿಚಾರಣೆಗೆ ಹಾಜರಾಗಿದ್ದು ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.

ಜೀವಾ ಡೆತ್ನೋಟ್ನಲ್ಲಿ ಏನಿದೆ? ಕರ್ನಾಟಕ ಭೋವಿ ಕಾರ್ಪೊರೇಷನ್ ಹಗರಣದಲ್ಲಿ ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಕನಕಲಕ್ಷ್ಮಿ ಅವರು ತನ್ನನ್ನು ವಿವಸ್ತ್ರಗೊಳಿಸಿದ್ದಲ್ಲದೆ 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಇದರಿಂದಾಗಿ ಮಾನಸಿಕವಾಗಿ ನೊಂದಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಪತ್ರದಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಭೋವಿ ಕಾರ್ಪೊರೇಷನ್ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಿತ್ತಿ. ಡಿವೈಎಸ್ಪಿ ಕನಕಲಕ್ಷ್ಮಿ ವಿಚಾರಣೆಯ ನೇತೃತ್ವ ವಹಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ 34 ವರ್ಷದ ವಕೀಲೆ ಜೀವಾ ಅವರನ್ನು ವಶಕ್ಕೆ ಪಡೆಯಲಾಗಿತ್ತು, ವಿಚಾರಣೆಯ ಕೆಲ ದಿನದ ಬಳಿಕ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಏನಿದು ಭೋವಿ ಕಾರ್ಪೊರೇಷನ್ ಹಗರಣ? ಕೆ.ಎನ್. ಸೂರ್ಯ ಕಲಾವತಿ ಮಾರ್ಚ್ 18, 2023 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹಣಕಾಸು ವಂಚನೆ ಆರೋಪದ ಮೇಲೆ ದೂರು ನೀಡಿದ್ದರು. ಭೋವಿ ಅಭಿವೃದ್ಧಿ ನಿಗಮದಿಂದ ಸಾಲ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ವಂಚಕರು ಮಹಿಳೆಯರು ಸೇರಿದಂತೆ ಅನೇಕ ವ್ಯಕ್ತಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಸರಸ್ವತಿ ಮತ್ತು ಲಕ್ಷ್ಮಿ ಎನ್ನುವವರು ಅಕ್ಟೋಬರ್ 2021 ರಲ್ಲಿ ಕಲಾವತಿಯನ್ನು ಸಂಪರ್ಕಿಸಿ, ಮರುಪಾವತಿಯ ನಂತರ ₹25,000 ಲಂಚಕ್ಕೆ ಪ್ರತಿಯಾಗಿ ಸಾಲದ ಭರವಸೆ ನೀಡಿದರು. ಅವರು ಅಗತ್ಯ ದಾಖಲೆಗಳು, ಎರಡು ಖಾಲಿ ಚೆಕ್ಗಳನ್ನು ನೀಡಿದ್ದರು ಮತ್ತು ಖಾಲಿ ಕಾಗದಗಳಿಗೆ ಸಹಿ ಹಾಕಿದರು. ನಂತರ ತನಗೆ ತಿಳಿಯದಂತೆ ತನ್ನ ದಾಖಲೆಗಳನ್ನು ಬಳಸಿಕೊಂಡು 5 ಲಕ್ಷ ರೂಪಾಯಿ ಸಾಲ ಪಡೆಯಲಾಗಿದೆ ಎಂದು ತಿಳಿದುಕೊಂಡಿದ್ದಾರೆ. ಇದರಲ್ಲಿ 4.75 ಲಕ್ಷ ರೂಪಾಯಿ ಹಣವನ್ನು ನ್ಯೂ ಡ್ರೀಮ್ಸ್ ಎಂಟರ್ಪ್ರೈಸಸ್ ಎಂಬ ಕಂಪನಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದರು. ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ. ನಾಗರಾಜಪ್ಪ ಅವರ ಮನೆಯಲ್ಲೇ ವಕೀಲೆ ಜೀವಾ ಸಹೋದರಿ ಜೊತೆ ಬಾಡಿಗೆಗೆ ವಾಸವಿದ್ದರು. ತಮ್ಮ ಸಹೋದರಿ ಸಂಗೀತಾ ಒಡೆತನದ ಕಂಪನಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಪ್ರಕರಣದ ತನಿಖೆ ಮಾಡುವ ಸಂದರ್ಭದಲ್ಲಿ ವಕೀಲೆ ಜೀವಾ ಸೇರಿದಂತೆ ಹಲವು ವ್ಯಕ್ತಿಗಳ ವಿಚಾರಣೆ ನಡೆಸಲಾಯಿತು. ಈ ವಿಚಾರಣೆ ಬಳಿಕವೇ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಐಡಿ 2018 ರಿಂದ 2024ರವರೆಗೆ 5 ವರ್ಷಗಳಲ್ಲಿ 90 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ತಿಳಿಸಿತ್ತು.

Leave a Reply

Your email address will not be published. Required fields are marked *