ಬೆಂಗಳೂರು || ‘ಜೊತೆಗೆ ಮಲಗಲು 5,000 ಕೇಳುತ್ತಾಳೆ’: ಬೆಂಗಳೂರಿನಲ್ಲಿ ಪತ್ನಿ ವಿರುದ್ಧ ಪತಿ ದೂರು

ಬೆಂಗಳೂರು || 'ಜೊತೆಗೆ ಮಲಗಲು 5,000 ಕೇಳುತ್ತಾಳೆ': ಬೆಂಗಳೂರಿನಲ್ಲಿ ಪತ್ನಿ ವಿರುದ್ಧ ಪತಿ ದೂರು

ಬೆಂಗಳೂರು: ಗಂಡನಿಂದ ಕಿರುಕುಳ, ಅತ್ತೆಯ ಮನೆಯಲ್ಲಿ ದೌರ್ಜನ್ಯ ಎಂದು ಹೆಣ್ಣು ಮಕ್ಕಳು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಲಕ್ಷಾಂತರ ಪ್ರಕರಣಗಳನ್ನು ನೀವು ನೋಡಿರಬಹುದು. ಆದರೆ ಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿಯೇ ಪೊಲೀಸರ ಸಹಾಯದ ಮೊರೆ ಹೋಗುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಸುದ್ದಿಯಲ್ಲಿದ್ದು, ಪತ್ನಿ ನನ್ನ ಜೊತೆ ಮಲಗಲು ಪ್ರತಿದಿನ 5000 ರೂಪಾಯಿ ಡಿಮ್ಯಾಂಡ್ ಮಾಡುತ್ತಾಳೆ ಎಂದು ಪತಿ ಗಂಭೀರ ಆರೋಪ ಮಾಡಿದ್ದಾರೆ.

ಹೈಫೈ ಕಾರ್ಪೋರೇಟ್ ಹೆಂಡತಿ ನನಗೆ ನಿನ್ನ ಜೊತೆ ಸಂಸಾರ ಬೇಡ, ನನ್ನನ್ನು ಮುಟ್ಟಬೇಡ, ಮಕ್ಕಳು ಬೇಡ, ನನ್ನ ಬ್ಯೂಟಿ ಹಾಳಾಗತ್ತದೆ ಎಂದು ಕಾಟ ಕೊಡುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಬೆಂಗಳೂರಿನ ಶ್ರೀಕಾಂತ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ನೋಡಲು ಸುಂದರವಾದ ಪತ್ನಿ ಹೈಫೈ ಜೀವನವನ್ನೇ ಹೆಚ್ಚು ಆಸೆ ಪಡುತ್ತಿದ್ದಳಂತೆ. ಮದುವೆಯಾದ ಮೊದಮೊದಲು ಶ್ರೀಕಾಂತ್ ಕೂಡ ಹೆಂಡತಿಯ ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ಮದುವೆಯಾಗಿ ಎರಡು ವರ್ಷಗಳು ಕಳೆದರೂ ಕೂಡ ಹೆಂಡತಿ ಸಂಸಾರ ನಡೆಸಲು ಒಪ್ಪುತ್ತಿಲ್ಲ ಎನ್ನುವುದು ಶ್ರೀಕಾಂತ್ ಆರೋಪವಾಗಿದೆ.

ಹೆಂಡತಿ ನನ್ನನ್ನು ಮುಟ್ಟ ಬೇಡ, ಮಕ್ಕಳು ಬೇಡ, ದತ್ತು ಮಕ್ಕಳನ್ನು ಸಾಕೋಣ, ಜೊತೆಗೆ ಮಲಗಲು ನಿತ್ಯ 5,000 ರೂಪಾಯಿ ಕೊಡಬೇಕು, ಡಿವೋರ್ಸ್ ಕೊಡು, 45 ಲಕ್ಷ ರೂಪಾಯಿ ಕೊಡು ಅಂತಾ ಬೇಡಿಕೆ ಇಡುತ್ತಿದ್ದಾಳೆ. ತಾಳಿ ಹಾಗೂ ಕಾಲುಂಗುರ ಹಾಕಲ್ಲ, ನನ್ನನ್ನು ಮುಟ್ಟಿದರೆ ಡೆತ್ ನೋಟ್ ಬರೆದಿಟ್ಟು ಸಾಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪತಿ ಶ್ರೀಕಾಂತ್ ಪತ್ನಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತಿಯ ಸಾಲು ಸಾಲು ಆರೋಪಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀಕಾಂತ್ ಪತ್ನಿ, ‘ಈ ಹಿಂದೆ ನಾನೇ ವೈಯಾಲಿಕವಲ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ನನಗೆ ಹೊಡೆಯುತ್ತಾರೆ. ವರದಕ್ಷಿಣೆ ಕಿರುಕುಳ ಕೊಟ್ಟಿದ್ದಾರೆ. ಅವರ ತಾಯಿ ಬೆಡ್ ರೂಂನಲ್ಲಿ ಕ್ಯಾಮರಾ ಫಿಕ್ಸ್ ಮಾಡು ಅಂತಾರೆ. ಜೋಕು ಮಾಡಿರುವುದನ್ನು ಎಡಿಟ್ ಮಾಡಿ ವಿಡಿಯೋ ಕೊಟ್ಟಿದ್ದಾರೆ. ಅವರ ಸಂಪೂರ್ಣ ಕುಟುಂಬ ನನಗೆ ಕಿರುಕುಳ ನೀಡುತ್ತಿದೆ. ಹೀಗಾಗಿ ಡಿವೋರ್ಸ್ ತೆಗೆದುಕೊಳ್ಳೋಣ ಅಂದುಕೊಂಡೆ. ನಮ್ಮ ತಂದೆ ತಾಯಿ ಕಷ್ಟ ಪಟ್ಟು ಮದುವೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಕೂಡ ಕೇಳಿದ್ದೇನೆ’ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.

Leave a Reply

Your email address will not be published. Required fields are marked *