ಬೆಂಗಳೂರು || ಬೆಂಗಳೂರಿನ ಪಬ್ಗಳಲ್ಲಿ ಮೋಜು-ಮಸ್ತಿ ಮಾಡುವವರಿಗೆ ಗುಡ್ನ್ಯೂಸ್

ಬೆಂಗಳೂರು || ಬೆಂಗಳೂರಿನ ಪಬ್ಗಳಲ್ಲಿ ಮೋಜು-ಮಸ್ತಿ ಮಾಡುವವರಿಗೆ ಗುಡ್ನ್ಯೂಸ್

ಬೆಂಗಳೂರು: ನಮ್ಮ ಬೆಂಗಳೂರಿಗೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಸಿಟಿ ಸೇರಿದಂತೆ ಹಲವು ಹೆಸರುಗಳಿರುವಂತೆ ಪಬ್ ಸಿಟಿ ಎನ್ನುವ ಹೆಸರೂ ಇದೆ. ಏಕೆಂದರೆ ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಬ್ಗಳನ್ನು ಬೆಂಗಳೂರು ಹೊಂದಿದೆ. ಇಲ್ಲಿನ ಪಬ್ಗಳಲ್ಲಿ ಎಂಜಾಯ್ ಮಾಡಿ ಹೋಗೋಣ ಅಂತಾ ಹೊರ ರಾಜ್ಯಗಳು ಮಾತ್ರವಲ್ಲ, ವಿದೇಶದಿಂದಲೂ ಜನ ಬಂದು ಭೇಟಿ ನೀಡುತ್ತಾರೆ. ಸಂಜೆಯಾಗುತ್ತಲೇ ರಂಗೇರುವ ಈ ಪಬ್ಗಳಿಗೆ ರಾಜ್ಯದಲ್ಲಿ ಮೂಗುದಾರವೂ ಇದೆ. ಕೆಲ ನಿಯಮಗಳನ್ನು ಪಬ್ಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಒಂದು ಗುಡ್ನ್ಯೂಸ್ ಕೊಟ್ಟಿದೆ. ಇದು ಪಬ್ಪ್ರಿಯರಿಗೆ ನಿಜಕ್ಕೂ ಸಂತಸದ ಸುದ್ದಿ ಎನ್ನಲಾಗಿದೆ.

ಪಬ್ಗಳ ವಿಚಾರವಾಗಿ ಸದನದಲ್ಲೇ ಭಾರಿ ಚರ್ಚೆಯಾಗಿದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 10.30ರಿಂದ ರಾತ್ರಿ 11.30ರವರೆಗೆ ಮಾತ್ರವೇ ಪಬ್ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮೋಜು ಮಸ್ತಿ ಮಾಡುವವರಿಗೆ ಇದು ದೊಡ್ಡ ಸಮಸ್ಯೆಯೇ ಆಗಿತ್ತು. ಕೆಲವರು ತಡರಾತ್ರಿವರೆಗೆ ಪಬ್ ತೆರೆದಿದ್ದರೆ ಇನ್ನೂ ಮಜಾ ಇರ್ತಿತ್ತು ಅನ್ಕೊಳ್ಳೋರೇ ಹೆಚ್ಚು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಮಹತ್ವದ ತೀರ್ಮಾನ ಕೈಗೊಳ್ಳುತ್ತಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಅವಧಿ ಮೀರಿ ಪಬ್ಗಳು ಕಾರ್ಯಾಚರಣೆ ನಡೆಸುತ್ತಿದ್ದು ಇದರ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಬಿಜೆಪಿ ಹೆಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರಿಸಿದರು. ಬೆಂಗಳೂರು ನಗರದಲ್ಲಿ ಪಬ್ಗಳು ರಾತ್ರಿ 11.30ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಆದರೆ ನಗರದಲ್ಲಿ ನಿಗದಿತ ಅವಧಿ ಮೀರಿ ಪಬ್ಗಳು ಕಾರ್ಯಾಚರಣೆ ನಡೆಸುತ್ತಲೇ ಇವೆ. ಇದಕ್ಕೆ ಬದಲು ಕಾರ್ಯಾಚರಣೆ ಅವಧಿ ವಿಸ್ತರಿಸುವುದೇ ಒಳ್ಳೆಯದು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್ ತೆರೆಯುವ ಬಗ್ಗೆ ಚರ್ಚಿಸಿ. ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಬೆಂಗಳೂರು ಅಂತರರಾಷ್ಟ್ರೀಯ ಖ್ಯಾತಿ ಹೊಂದಿದ್ದು, ಸದಾ ಲೈವ್ ಆಗಿರಬೇಕು. ಹೀಗಾಗಿ ತಡರಾತ್ರಿ 1 ಗಂಟೆವರೆಗೂ ಪಬ್ಗಳನ್ನು ತೆರೆಯಲು ಅವಕಾಶ ಮಾಡಿಕೊಡಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಿಯಮ ಮೀರಿದವರ ಮೇಲೆ ಕ್ರಮ ಜರುಗಿಸುವ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ಯಾವುದೇ ನಿಯಮಗಳು ಕಿರುಕುಳವಾಗಿ ಪರಿಣಮಿಸಬಾರದು. ಬೆಂಗಳೂರು ಅಂತರಾಷ್ಟ್ರೀಯ ಖ್ಯಾತಿಯ ನಗರ. ಇಲ್ಲಿ ಅನೇಕರು ರಾತ್ರಿ ವೇಳೆಯೂ ಉದ್ಯೋಗ ಮಾಡುವವರಿದ್ದಾರೆ. ಹೀಗಾಗಿ ರಾತ್ರಿ ವೇಳೆ ಪಬ್ಗಳ ಕಾರ್ಯಾಚರಣೆಗೆ ಅವಕಾಶ ಕೊಡುವುದು ಸರಿ. ಈ ಸಂಬಂಧ ಇರುವ ಎಲ್ಲ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದೂ ಹೇಳಿದ್ದಾರೆ. ಈ ವಿಚಾರ ಕೇಳಿ ಬೆಂಗಳೂರಿಗರು ಫುಲ್ ಖುಷಿಯಾಗಿದ್ದಾರೆ.

Leave a Reply

Your email address will not be published. Required fields are marked *