ಓಂ’ ಮಂತ್ರ ಪಠನೆಯಿಂದ ಪ್ರಯೋಜನಗಳೇನು?  ಆರೋಗ್ಯಕ್ಕೂ ಪ್ರಯೋಜನ ಉಂಟಾ?

ಓಂ' ಮಂತ್ರ ಪಠನೆಯಿಂದ ಪ್ರಯೋಜನಗಳೇನು? ಆರೋಗ್ಯಕ್ಕೂ ಪ್ರಯೋಜನ ಉಂಟಾ?

ಓಂ ಮಂತ್ರ ಪಠಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪದಗಳನ್ನು ಉಚ್ಛರಿಸುವ ಕ್ರಿಯೆಯನ್ನು ಮಂತ್ರ ಎಂದು ಹೇಳಲಾಗುತ್ತದೆ. ದೇಹ, ಮನಸ್ಸಿನ ಮೇಲೆ ಮಂತ್ರ ದೊಡ್ಡ ಪರಿಣಾಮ ಬೀರುತ್ತದೆ. ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ನಮ್ಮ ದೇಹ ಕೂಡ ಸದೃಢವಾಗಿರುತ್ತದೆ. ಮನುಷ್ಯನ ಜೀವನದಲ್ಲಿ ಉತ್ತಮ ಬದಲಾವಣೆ ತರುವಂತಹ ಮಂತ್ರಗಳು ವೇದ ಗ್ರಂಥಗಳ ಹಾಗೂ ವಿವಿಧ ಧಾರ್ಮಿಕ ಪುಸ್ತಕಗಳ ಸಂಪೂರ್ಣ ಪಠ್ಯದ ಆಧಾರವಾಗಿವೆ.

ಓಂ ಮಂತ್ರದ ಪ್ರಯೋಜನಗಳೆಂದರೆ,

ಒತ್ತಡ ದೂರ: ಓಂ ಉಚ್ಛಾರ ಮಾಡುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಒತ್ತಡದಿಂದ ಉತ್ಪತ್ತಿಯಾಗುವ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಓಂ ಜಪಿಸುವುದರಿಂದ ಒತ್ತಡ ದೂರವಾಗುತ್ತದೆ.

ಭಯ ಮಾಯ: ನಿಮಗೆ ಬೇಗನೇ ಕೋಪಗೊಳ್ಳುವ ಸ್ವಭಾವದರಾಗಿದ್ದರೆ, ತಾಳ್ಮೆ ಇಲ್ಲದಿದ್ದರೆ ಓಂ ಪಠಿಸುವುದು ಉತ್ತಮವಾದ ಮಾರ್ಗವಾಗಿದೆ. ಮನಸ್ಸಿನಲ್ಲಿ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ದೀರ್ಘವಾಗಿ ಉಸಿರಾಟ ಮಾಡುವ ಮೂಲಕ ಐದು ಬಾರಿ ಓಂ ಉಚ್ಛರಿಸಿದರೆ ಸಾಕು ಮನಸ್ಸಿನಲ್ಲಿರುವ ಭಯ ದೂರವಾಗುತ್ತದೆ.

ಯೌವನದ ಶಕ್ತಿ: ಓಂ ಉಚ್ಛಾರಣೆ ಮಾಡುವುದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ. ಇದರಿಂದ ಮತ್ತೆ ಯೌವನದ ಶಕ್ತಿ ದೇಹದಲ್ಲಿ ರವಾನೆಯಾಗುತ್ತದೆ.

ಸುಸ್ತಿಗೆ ಪರಿಹಾರ: ಆಯಾಸ ತಪ್ಪಿಸಲು ಓಂ ಮಂತ್ರವು ಉತ್ತಮವಾಗಿದೆ. ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರ ಮಾಡುವುದು.

ಜೀರ್ಣಕ್ರಿಯೆ ಸುಧಾರಣೆ: ಓಂ ಉಚ್ಛಾರಣೆ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ. ಇದರಿಂದಾಗಿ ಜೀರ್ಣ ಶಕ್ತಿಯು ವೇಗಗೊಳ್ಳುತ್ತದೆ.

ನಿದ್ರಾಹೀನತೆ ಹೋಗಲಾಡಿಸುತ್ತೆ: ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬಾರದಿದ್ದರೆ, ಓಂ ಎಂದು ಪಠಣ ಮಾಡಬೇಕಾಗುತ್ತದೆ. ಇದರ ಪರಿಣಾಮ ಮನಸ್ಸು ಶಾಂತವಾಗಿ ಉತ್ತಮ ನಿದ್ರೆ ಬರುತ್ತದೆ.

ರಕ್ತ ಸಂಚಾರಕ್ಕೆ ಉತ್ತಮ: ಓಂ ಪಠಿಸುವುದರಿಂದ ಹೃದಯಕ್ಕೆ ರಕ್ತದ ಹರಿವನ್ನು ಸಮತೋಲನ ಮಾಡಲು ಸಾಧ್ಯವಾಗುತ್ತದೆ. ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ದೇಹದಲ್ಲಿರುವ ರಕ್ತ ಸಂಚಾರ ಸುಗಮಗೊಳ್ಳುತ್ತದೆ.

ಶ್ವಾಸಕೋಶದ ಆರೋಗ್ಯ: ಓಂ ಜಪಿಸುವುದರಿಂದ ಶ್ವಾಸಕೋಶದ ಸಮಸ್ಯೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪ್ರಾಣಯಾಮದೊಂದಿಗೆ ಓಂ ಪಠಣ ಮಾಡಿದರೆ ಶ್ವಾಸಕೋಶಗಳು ಬಲಗೊಳ್ಳುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *