ಕೊರಟಗೆರೆ || ಚಂಚಲ ಮನಸ್ಸಿನ ಮನುಷ್ಯರನ್ನು ಸರಿಪಡಿಸಲು ಧಾರ್ಮಿಕ ಕಾರ್ಯಕ್ರಮದಿಂದ ಮಾತ್ರ ಸಾಧ್ಯ: ಗೃಹ ಸಚಿವ Dr. G. Parameshwar..

ಕೊರಟಗೆರೆ || ಚಂಚಲ ಮನಸ್ಸಿನ ಮನುಷ್ಯರನ್ನು ಸರಿಪಡಿಸಲು ಧಾರ್ಮಿಕ ಕಾರ್ಯಕ್ರಮದಿಂದ ಮಾತ್ರ ಸಾಧ್ಯ: ಗೃಹ ಸಚಿವ Dr. G. Parameshwar..

ಕೊರಟಗೆರೆ: ಇತ್ತಿಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸ್ಥಿರವಿಲ್ಲದೆ ಚಂಚಲವಾಗುತ್ತಿದ್ದು, ಚಂಚಲ ಮನಸ್ಸು ಸ್ಥಿರವಾಗಿರಿಸಲು ಧಾರ್ಮಿಕ ಕಾರ್ಯಕ್ರಮಗಳತ್ತ ಹೋದರೆ ಮಾತ್ರ ಸಾಧ್ಯ. ಗ್ರಾಮಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಗ್ರಾಮ ದೇವತೆ ಕೋಟೆ ಮಾರಮ್ಮದೇವಿ ಹಾಗೂ ಶ್ರೀ ಕೊಲ್ಲಾಪುರದಮ್ಮನವರ ನೂತನ ದೇವಾಲಯ ಮತ್ತು ಮೂಲ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೊತ್ಸವದ ಎರಡನೇ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಪ್ರತಿ ಗ್ರಾಮಗಳಲ್ಲೂ ಗ್ರಾಮದೇವತಗಳು ಇದ್ದು ಈ ದೇವತೆಗಳು ಹೆಚ್ಚಿನ ಮಹತ್ವ ಪಡೆದಿರುತ್ತವೆ ಹಾಗೂ ಜನ ಸಮುದಾಯ ತಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಬೇಕಾದರೆ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಗ್ರಾಮಗಳಲ್ಲಿ ದೇವಾಲಯಗಳ ಜೀರ್ಣೋದ್ದಾರ ಕಷ್ಟದ ಕೆಲಸ. ಆದರೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಪ್ರಾಮಾಣಿಕತೆ ಹಾಗೂ ಶ್ರದ್ದೆಯಿಂದ ದೇವಾಲಯ ಉತ್ತಮವಾಗಿ ನಿರ್ಮಿಸಿ ದೇವತೆಗಳ ಪುನರ್ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದ ಅವರು, ಈ ದೇವತಾ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ದೇವಾಲಯಕ್ಕೆ ಜಮೀನು: ಮುಂದಿನ ದಿನಗಳಲ್ಲಿ ದೇವಾಲಯ ಅಭಿವೃದಿ ಹೊಂದಬೇಕಾದರೆ ಆಥಿüðಕವಾಗಿ ಸದೃಢÀವಾಗಿರಬೇಕು ಆರ್ಥಿಕ ಸಹಕಾರ ಅವಶ್ಯಕವಾಗಿದ್ದು ಕೊರಟಗೆರೆ ಕೋಟೆ ಮಾರಮ್ಮದೇವಿಯ ದೇವಾಲಯ ಅಭಿವೃದ್ದಿಗೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿ ಅದರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ದೇವಾಲಯಕ್ಕೆ ಆರ್ಥಿಕವಾಗಿ ಆದಾಯ ಬರುವಂತೆ ಮಾಡುವುದಾಗಿ ಇದಕ್ಕೆ ದೇವಾಲಯ ಅಭಿವೃಧ್ದಿ ಸಮಿತಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

            ಈ ಸಂದರ್ಭದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ದೇವಾಲಯವನ್ನು ವೀಕ್ಷಿಸಿದರು. ನೂತನ ದೇವಾಲಯ ನಿಮಾರ್ಣ ಮಾಡಿದ ಶಿಲ್ಪಿ ಮಹಾಲಿಂಗಯ್ಯ ನವರನ್ನು ಅಭಿನಂದಿಸಿ ಗೌರವಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಪ.ಪಂ.ಅಧ್ಯಕ್ಷೆ ಅನಿತಾ, ಸ್ಥಾಯಿಸಮಿತಿ ಅಧ್ಯಕ್ಷ ಹೇಮಲತಾಮಂಜುನಾಥ್, ಸದಸ್ಯರಾದ ಭಾಗ್ಯಮ್ಮ ಗಣೇಶ್, ಕೆ.ಆರ್.ಓಬಳರಾಜು, ದೇವಾಲಯ ಸಮಿತಿ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಕೆ.ಎನ್.ಲಕ್ಮ್ಮಿನಾರಾಯಣ್, ಸದಸ್ಯರಾದ ಎಸ್.ಪಿ.ಎಲ್.ರಾವ್, ಮುರಳಿಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಕೆ.ಬಿ.ಲೋಕೇಶ್, ಪುನೀತ್, ರಾಘವೇಂದ್ರ ಅರ್ಚಕ ಶ್ರೀಧರಾಚಾರ್, ದೀಪಕ್ಆಚಾರ್, ಹರೀಶಾಚಾರ್, ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *