ಮೈಸೂರು: ಆಳವಾದ ಗುಂಡಿಗೆ ಬಿದ್ದ ಕಾಡಾನೆಯೊಂದು ಮೇಲೇಳಲಾಗದೇ ಪರದಾಡಿರುವ ಘಟನೆ ನಂಜನಗೂಡು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದಿದೆ.

ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿರುವ ಗುಂಡಿಗೆ ಗಂಡು ಕಾಡಾನೆ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯ ರೈತರೊಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಆನೆ ಮೇಲಕ್ಕೆ ಬರುವಂತೆ ಮಾಡಿದ್ದಾರೆ.
ಆಕ್ರೋಶಗೊಂಡಿರುವ ಕಾಡಾನೆ ಮೇಲೆ ಬಂದ ಮೇಲೆ ಅಟ್ಟಾಡಿಸಿಕೊಂಡು ಬಂದಿದೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಬಿಗಳಡಿ ಸಿಲು ಒದ್ದಾಡಿದ್ದ ಒಂಟಿ ಸಲಗ: ಮೈಸೂರಲ್ಲೇ ಕಳೆದ ಮಾರ್ಚ್ನಲ್ಲಿ, ಹೆಚ್.ಡಿ.ಕೋಟೆ ತಾಲೂಕಿನ ಬಾಡಗ ಗ್ರಾಮದ ಕಾಡಂಚಿನಲ್ಲಿ ಘಟನೆ ನಡೆದಿತ್ತು. ಕಾಡಿನಿಂದ ನಾಡಿಗೆ ಆನೆ ಆಹಾರ ಅರಸಿ ಬಂದಿತ್ತು. ಹೀಗೆ ಬಂದ ಒಂಟಿ ಸಲಗ ತಡೆಗೋಡೆ ಕಂಬಿಗಳಡಿ ಸಿಲುಕಿ ಗಂಟೆಗಳ ಕಾಲ ಒದ್ದಾಡಿತ್ತು.
ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿದ್ದರು. ರಕ್ಷಣೆ ವೇಳೆ ಬ್ಯಾರಿಕೇಡ್ಗೆ ಸಿಲುಕಿ ಸುಸ್ತಾಗಿದ್ದ ಒಂಟಿ ಸಲಗಕ್ಕೆ ನೀರು ಹಾಕುತ್ತಿದ್ದಂತೆ, ಕಂಬಿಯಿಂದ ಬಿಡಿಸಿಕೊಂಡು ಕಂದಕ ದಾಟಿ ಅರಣ್ಯದೊಳಗೆ ಆನೆ ಸೇರಿಕೊಂಡಿತ್ತು.