ದಾವಣಗೆರೆ || ಮಾರುಕಟ್ಟೆಯಲ್ಲಿ ಅಡಿಕೆ ದರ ಭರ್ಜರಿ ಏರಿಕೆ; ಮೇ 15ರ ಅಂಕಿಅಂಶಗಳು ಇಲ್ಲಿವೆ

ದಾವಣಗೆರೆ || ಮಾರುಕಟ್ಟೆಯಲ್ಲಿ ಅಡಿಕೆ ದರ ಭರ್ಜರಿ ಏರಿಕೆ; ಮೇ 15ರ ಅಂಕಿಅಂಶಗಳು ಇಲ್ಲಿವೆ

ದಾವಣಗೆರೆ : ರಾಜ್ಯದಲ್ಲಿ ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಿರುತ್ತದೆ. ಇನ್ನು ಇಳಿಕೆಯತ್ತ ಸಾಗಿದ್ದ ದರ ಮತ್ತೆ ಭಾರೀ ಪ್ರಮಾಣದಲ್ಲಿ ಏರಿಯಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಹಾಗಾದ್ರೆ ಇದೀಗ ಜಿಲ್ಲೆಯಲ್ಲಿ ಇಂದು (ಮೇ 15) ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 59,019 ರೂಪಾಯಿ ಆಗಿದೆ. ಇಳಿಕೆಯತ್ತ ಸಾಗಿದ್ದ ದರ ಮತ್ತೆ ಏರಿಕೆಯಾಗಿದ್ದು, ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ತುಸು ಕಡಿಮೆ ಆದಂತಾಗಿದೆ.

ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್ಗಳಲ್ಲಿ) ಗರಿಷ್ಠ ದರ 59,019 ರೂಪಾಯಿ, ಕನಿಷ್ಠ ದರ 54,569 ರೂಪಾಯಿ ಇದ್ದು, ಸರಾಸರಿ ಬೆಲೆ 56,856 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 31,386 ರೂಪಾಯಿ, ಕನಿಷ್ಠ ದರ 27,187 ರೂಪಾಯಿ, ಸರಾಸರಿ ದರ 29,276 ರೂಪಾಯಿ ಆಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಅದರಲ್ಲೂ ಇದೀಗ ಬೇಸಿಗೆಗೂ ಮುನ್ನ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ಅಡಿಕೆ ತೋಟ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಇಲ್ಲಿಯವರೆಗೂ ಸತತವಾಗಿ ಏರಿಕೆಯಾಗುತ್ತಲೇ ಬಂದಿದ್ದು, ಏಪ್ರಿಲ್ ಅಂತ್ಯಕ್ಕೆ 60,000 ರೂಪಾಯಿ ದಾಟಿತ್ತು. ಆದರೆ ಇದೀಗ ಮೇ ಆರಂಭದಲ್ಲಿ ಇಳಿಕೆಯಾಗಿ ಮತ್ತೆ ಏರಿಕೆಯಾಗಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ.

2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ ಅಂದರೆ, 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು. ಇದೀಗ 2025ರ ಏಪ್ರಿಲ್ ತಿಂಗಳ ಆರಂಭದಿಂದ ಏರಿಕೆ ಆಗುತ್ತಲೇ ಬಂದಿತ್ತು. ಆದರೆ, ಮತ್ತೆ ಮೇ ಆರಂಭದಲ್ಲಿ ಮತ್ತೆ ಇಳಿಕೆಯಾಗಿ, ಇದೀಗ ಏರಿಕೆಯತ್ತ ಸಾಗಿದೆ.

ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಕೂಡ ಕಳೆದ ವರ್ಷದಂತೆ ಮುಂಗಾರು ಆರ್ಭಟಿಸುವ ಮುನ್ಸೂಚನೆ ಇದ್ದು, ಉತ್ತಮ ಫಸಲಿನ ಜೊತೆ ಮತ್ತಷ್ಟು ಬೆಲೆ ಹೆಚ್ಚಳ ಆಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಅಲ್ಲದೆ, ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲಾಗುತ್ತಿದ್ದು, ಇದರಿಂದ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಈ ನಡುವೆಯೇ ಹಲವೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಅದರಲ್ಲೂ ಮುಂದಿನ ದಿನಗಳಲ್ಲಿ ದಕ್ಷಿಣ ಒಳನಾಡು ಸೇರಿದಂತೆ ಉತ್ತರ ಒಳನಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ ಜಿಲ್ಲೆ ಸಹ ದಕ್ಷಿಣ ಒಳನಾಡಿಗೆ ಸೇರಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ಮಳೆ ಆವರಿಸುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.

Leave a Reply

Your email address will not be published. Required fields are marked *