ದೇಶದ brave soldiers ಅಪಮಾನ ಗೊಳಿಸಿರುವ ಸಚಿವ Vijay Sha ನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹ

ದೇಶದ brave soldiers ಅಪಮಾನ ಗೊಳಿಸಿರುವ ಸಚಿವ Vijay Sha ನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹ

ಬೆಂಗಳೂರು : ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನ ದಿಟ್ಟತನದಿಂದ ಎದುರಿಸಿದ ಆಪರೇಷನ್ ಸಿಂಧೂರ ತಂಡದ ಕರ್ನಲ್ ಸೋಫಿಯಾ ಖುರೇಷಿ ರವರ ದಿಟ್ಟತನದ ಹೋರಾಟವನ್ನು ಅಪಮಾನ ಗೊಳಿಸಿರುವ ದೇಶದ್ರೋಹಿ ಪಾಕಿಸ್ತಾನದ ಏಜೆಂಟ್ ವಿಜಯ್ ಶಾ ನನ್ನ ಕೂಡಲೇ ಗಲ್ಲಿಗೆ ಹಾಕಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಪ್ರತಿಕೃತಿ  ದಹಿಸಲಾಯಿತು,

ಬಿಜೆಪಿಯ ರಣೇಡಿಗಳು ಮಹಿಳೆಯರನ್ನ ಅಪಮಾನಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಿ , ಶತ್ರು ರಾಷ್ಟ್ರವನ್ನು ಸದೆಬಡೆದ ದಿಟ್ಟ ಮಹಿಳೆ ಕರ್ನಲ್ ಸೋಫಿಯಾ ಖುರೇಷಿ ಅವರನ್ನ ಇಂದು ಅಪಮಾನಿಸಿರುವುದು ದೇಶದ ನಾಗರಿಕ ಸಮಾಜವನ್ನು ಅಪಮಾನಗೊಳಿಸಿದಂತಾಗಿದೆ,

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಮುಂದಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ರವರ ದಿಟ್ಟತನವನ್ನು ಇಡೀ ವಿಶ್ವವೇ ಮೆಚ್ಚಿದೆ ಆದರೂ ಕಿಡಿಗೇಡಿ ಬಿಜೆಪಿ ನಾಯಕರು ತನ್ನ ಹಿಂದಿನ ಕೋಮು ಭಾವನೆಯನ್ನ ಈ ಮೂಲಕ ಪ್ರಚಾರ ಪಡಿಸಿಕೊಳ್ಳಲು ಅವರನ್ನು ಅಪಮಾನಗೊಳಿಸಿರುವುದು ದೇಶದ ಮಹಿಳೆಯರನ್ನು ಅಪಮಾನಿಸಿದಂತಾಗಿದೆ ,

ಪಾಕಿಸ್ತಾನವನ್ನು ಇಬ್ಭಾಗ ಮಾಡಿದ ಶ್ರೀಮತಿ ಇಂದಿರಾ ಗಾಂಧಿಜಿ ರವರನ್ನು ಇಡೀ ದೇಶವೇ ಇಂದು ನೆನೆಯುತ್ತಿದೆ ಅದರಂತೆ ಕರ್ನಲ್ ಸೋಫಿಯಾ ಖುರೇಷಿ ರವರ ದಿಟ್ಟತನದ ಪರಾಕ್ರಮವನ್ನು ಜನ ಮೆಚ್ಚುತ್ತಿರುವದನ್ನು ಸಹಿಸದ ಬಿಜೆಪಿಯ ರಣಹೇಡಿಗಳು ಇಂದು ಇಂತಹ ದೇಶದ್ರೋಹಿ ಹೇಳಿಕೆಗಳನ್ನು ನೀಡಿ ಭಾರತೀಯ ಸೇನೆಯನ್ನೇ ಅಪಮಾನ ಗೊಳಿಸುತ್ತಿದ್ದಾರೆ,

ಕೂಡಲೇ ಇಂತಹ ಹೇಳಿಕೆ ನೀಡಿರುವ ದೇಶದ್ರೋಹಿ ವಿಜಯ್ ಶಾ ನನ್ನು  ಗಡಿ ಪಾರು ಮಾಡಬೇಕು ಮತ್ತು ಅವನನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಇಲ್ಲದೆ ಹೋದರೆ ದೇಶದ್ರೋಹಿಗಳಿಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರು ನೇರ ಬೆಂಬಲ ನೀಡುತ್ತಿದ್ದಾರೆ ಎಂಬುವ ಹೊಣೆಯನ್ನು ಹೊರಬೇಕಾಗುತ್ತದೆ,

ಮಧ್ಯಪ್ರದೇಶದ ಸಚಿವ ವಿಜಯ್ ಶಾ ನನ್ನ ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು ದೇಶದ ಸೈನಿಕರಲ್ಲಿ ಹಾಗೂ ನಾಗರಿಕರಲ್ಲಿ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಬೇಕೆಂದು ಈ ಪ್ರತಿಭಟನೆ ಮೂಲಕ ಆಗ್ರಪಡಿಸಲಾಯಿತು

ಈ ಪ್ರತಿಭಟನೆಯಲ್ಲಿ ಎಂಇಐ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ , ಮುಖಂಡರಾದ ಎಂ.ಎ.ಸಲೀಂ , ಎ.ಆನಂದ್ , ಪ್ರಕಾಶ್, ಉಮೇಶ್, ಕೆ.ಟಿ ನವೀನ್ , ಸುಂಕದಕಟ್ಟೆ ನವೀನ್, ಓಬಳೇಶ್ , ನವೀನ್ ಸಾಯಿ, ಪುಟ್ಟರಾಜು , ಕುಶಾಲ್ ಹರುವೇಗೌಡ , ಪ್ರವೀಣ್ , ಸಂಜಯ್ ಸಶಿಮಠ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *