ತುಮಕೂರು || ಮಧುಗಿರಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ : ಪುರಸಭೆ ಕಂಡು ಕಾಣದಂತೆ ದಿವ್ಯ ಮೌನ

ತುಮಕೂರು || ಮಧುಗಿರಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ : ಪುರಸಭೆ ಕಂಡು ಕಾಣದಂತೆ ದಿವ್ಯ ಮೌನ

ಮಧುಗಿರಿ : ಐತಿಹಾಸಿಕ ಮಧುಗಿರಿ ಏಕಶಿಲಾ ಬೆಟ್ಟದ ತಪ್ಪಲಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ  ಬೆಳಕಿಗೆ ಬಂದಿದೆ.

ಬೆಂಗಳೂರು, ತುಮಕೂರು ಹಾಗೂ ಪಾವಗಡದ ನಡುವೆ ಪ್ರಯಾಣಿಸುವ ಅನೇಕ ವಾಹನಗಳು ಪ್ರತಿದಿನ ಈ ಮಾರ್ಗವಾಗಿ ಮಧುಗಿರಿ ಖಾಸಗಿ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಆದರೆ ಅಲ್ಲಿನ ಆವರಣದಲ್ಲಿ ರಾಷ್ಟ್ರಧ್ವಜವೊಂದು ಕುಣಿಕೆ ಹಾಕಿ ನಿಲ್ಲಿಸಲ್ಪಟ್ಟು, ರಾತ್ರಿ ಆಗಿದಂತೆ ಅವ್ಯವಸ್ಥಿತವಾಗಿ ಮೂತ್ರ ವಿಸರ್ಜನೆ ಮಾಡುವ ಸ್ಥಳದಲ್ಲಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

ಈ ಪರಿಸ್ಥಿತಿಯ ಕುರಿತು ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಇಂದು ಕೂಡ ಅಲ್ಲಿನ ದುರ್ವಾಸನೆ ನಿಯಂತ್ರಣಕ್ಕೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಆದರೆ ಬ್ಲೀಚಿಂಗ್ ಪೌಡರ್ ಹಾಕಿದಷ್ಟರಿಂದ ಸಮಸ್ಯೆ ಕೊನೆಗೊಳ್ಳುತ್ತದೆಯೇ..? ಎಂದು ಪ್ರಶ್ನೆಯಾಗಿದೆ.

ಪ್ರಜ್ಞೆ, ಜವಾಬ್ದಾರಿ ಮತ್ತು ರಾಷ್ಟ್ರಧ್ವಜದ ಗೌರವದ ನೆಲೆಯಲ್ಲಿ ಅಂತಹ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ನಿರ್ಲಕ್ಷ್ಯಪೂರಿತವಾಗಿ ಬಿಟ್ಟುಬಿಡುವುದು ಸೂಕ್ತವಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇದನ್ನು ಕೂಡಲೇ ತೆರವುಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *