ತುಮಕೂರು || ಕಾರ್ಖಾನೆಯ ಸಂಪು ಸ್ವಚ್ಛಗೊಳಿಸಲು ಹೋಗಿ ಇಬ್ಬರು ದಾರುಣ ಸಾ*

ತುಮಕೂರು || ಕಾರ್ಖಾನೆಯ ಸಂಪು ಸ್ವಚ್ಛಗೊಳಿಸಲು ಹೋಗಿ ಇಬ್ಬರು ದಾರುಣ ಸಾ*

ತುಮಕೂರು:-  ಕಾರ್ಖಾನೆಯ ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ನಡೆದಿದೆ.

ಇಬ್ಬರು ಸಾವನ್ನಪ್ಪಿದ್ದರೆ, ಇಬ್ಬರ ಸ್ಥಿತಿ ಅಸ್ವಸ್ಥ, ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.‌

 ಪ್ರತಾಪ್ ( 23) ವೆಂಕಟೇಶ್(32) ಮೃತ ದುರ್ದೈವಿಗಳಾಗಿದ್ದಾರೆ. ಪ್ರತಾಪ್ ಮಧುಗಿರಿ ತಾಲ್ಲೂಕಿನ ಮಾಗೋಡು ಗ್ರಾಮ ನಿವಾಸಿ ಹಾಗೂ  ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

  ವೆಂಕಟೇಶ್ (32) ಮೃತ ದುರ್ದೈವಿ. ಶಿರಾ ತಾಲ್ಲೂಕು   ತರೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಸಂಪು ಸ್ವಚ್ಛಗೊಳಿಸಲು ಹೋದ ಕಾರ್ಮಿಕರು ಸಾವನ್ನಪ್ಪಿದ್ದು, ತನಿಖೆಗೆ ಮೃತ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಂಜಣ್ಣ(42) ಅಸ್ವಸ್ಥ,  ಶಿರಾ ತಾಲ್ಲೂಕಿನ ತರೂರು ಗ್ರಾಮದ ನಿವಾಸಿಯಾಗಿದ್ದು,  ಯುವರಾಜ್ (32) ಅಸ್ವಸ್ಥ,  ಶಿರಾ ತಾಲ್ಲೂಕು ತರೂರು ಗ್ರಾಮದ ನಿವಾಸಿಯಾಗಿದ್ದಾರೆ.

ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಂಪನಿಯಲ್ಲಿ

ಸಂಪು ಸ್ವಚ್ಚಗೊಳಿಸುವಾಗ ಉಸಿರುಗಟ್ಟಿ ಸಾವನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಕಾರ್ಖಾನೆಯಲ್ಲಿ ಸಂಗ್ರಹವಾಗುವ

1 ಲಕ್ಷ ಲೀಟರ್ ಸಾಮರ್ಥ್ಯದ ಸಂಪು ಸ್ವಚ್ಛಗೊಳಿಸುವ ವೇಳೆ ಘಟನೆ ನಡೆದಿದೆ. ಮಂಜಣ್ಣ ಎಂಬುವವರು ಮೊದಲು ಸ್ವಚ್ಛಗೊಳಿಸಲು ಹೋಗಿದ್ದಾರೆ. ಅವರು ಉಸಿರುಗಟ್ಟಿದ್ದಾಗ ಅವರನ್ನು ಉಳಿಸಲು ಹೋದ ಪ್ರತಾಪ್ ಮತ್ತು ವೆಂಕಟೇಶ್ ಸಾವನ್ನಪ್ಪಿದ್ದಾರೆ. ಮಂಜಣ್ಣ ಬಚಾವ್ ಆಗಿದ್ದಾರೆ.

ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬುಧವಾರ  ಬೆಳಗ್ಗೆ ತರೂರು ಗ್ರಾಮದ ನಾಲ್ವರು ಸಂಪು ಸ್ವಚ್ಛಗೊಳಿಸಲು ಹೋಗಿದ್ದರು.

ನಾಲ್ವರು ಕಾರ್ಮಕರ ಜೊತೆಗೆ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಕೂಡ ಹೋಗಿದ್ದ. ಮೊದಲು ಮಂಜು ಸಂಪಿಗೆ ಇಳಿದ್ದಿದ್ದರು. ಮಂಜು ಅಸ್ವಸ್ಥಗೊಂಡಿದ್ದನ್ನ ಕಂಡು ಉಳಿಸಲು ಹೋದ ಪ್ರತಾಪ್ ಹಾಗೂ ವೆಂಕಟೇಶ್ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *