ಹೈದರಾಬಾದ್ || 3 ದಿನದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಏರಿಕೆ ಕಂಡ ಬಂಗಾರ

ಹೈದರಾಬಾದ್ || 3 ದಿನದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಏರಿಕೆ ಕಂಡ ಬಂಗಾರ

ಹೈದರಾಬಾದ್: ಬಂಗಾರದ ಬೆಲೆ ದೇಶದಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಕಳೆದ ಮೂರು ದಿನಗಳಲ್ಲಿ ಬಂಗಾರದ ಬೆಲೆ ಮೂರೂವರೆ ಸಾವಿರಕ್ಕೂ ಹೆಚ್ಚು ಏರಿಕೆ ಕಂಡಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ ರೂ. 98,500 ರೂ. ಆಗಿತ್ತು. ಇಂದು ಮತ್ತೆ 540 ರೂ ಏರಿಕೆ ಆಗುವ ಮೂಲಕ 99,040ಕ್ಕೆ ಹೆಚ್ಚಳಗೊಂಡಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಬುಧವಾರ 1,00,013 ರೂ. ಇದ್ದದ್ದು ಗುರುವಾರ 1350 ರೂ ಏರಿಕೆ ಆಗುವ ಮೂಲಕ 1,01,398 ರೂ.ಗೆ ತಲುಪಿದೆ.

•          ಬೆಂಗಳೂರಿನಲ್ಲಿ 99.9 ಫ್ಯೂರಿಟಿಯ ಚಿನ್ನದ ನಾಣ್ಯದ ಬೆಲೆ 98, 950 ರೂ ಇದ್ದರೆ, ಒಂದು ಕೆ ಜಿ ಬೆಳ್ಳಿಯ ಬೆಲೆ 101498 ರೂ ಇದೆ.

•          24 ಕ್ಯಾರೆಟ್ ನ 10 ಗ್ರಾಂ ಬಂಗಾರ 97430 ರೂ ದರವಿದೆ.

•          22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 89310 ರೂ ಇದೆ.

ಹೈದರಾಬಾದ್ನಲ್ಲಿ ಗುರುವಾರ ಹತ್ತು ಗ್ರಾಂ ಚಿನ್ನದ ನಾಣ್ಯದ ಬೆಲೆ 99,040ರೂ.ಗೆ ಏರಿಕೆ ಆಗಿದೆ. ಇನ್ನು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ. 1,01,398.ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿದ್ದವುಗಳಾಗಿವೆ. ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತಗೊಳ್ಳುತ್ತವೆ.

ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಬುಧವಾರ ಒಂದು ಔನ್ಸ್ ಚಿನ್ನದ ಬೆಲೆ 3,308 ಡಾಲರ್ ಇತ್ತು, ಆದರೆ ಗುರುವಾರ 30 ಡಾಲರ್ ಏರಿಕೆಯಾಗಿ 3,338 ಡಾಲರ್ ತಲುಪಿದೆ. ಬೆಳ್ಳಿಯ ಪ್ರಸ್ತುತ ಬೆಲೆ ಪ್ರತಿ ಔನ್ಸ್ಗೆ $33.58 ಆಗಿದೆ.

ಕಳೆದ ಮೂರು ದಿನಗಳ ಹಿಂದೆ 95 ಸಾವಿರದ ಆಸುಪಾಸಿನಲ್ಲಿದ್ದ ಬಂಗಾರ ಮತ್ತೆ ಲಕ್ಷದ ಗಡಿಗೆ ಬಂದು ನಿಂತಿದೆ. ಸುಮಾರು 3.5 ಸಾವಿರಕ್ಕೂ ಹೆಚ್ಚು ಏರಿಕೆ ಕಂಡು ಆಭರಣ ಪ್ರಿಯರನ್ನು ನಿರಾಸೆಗೊಳಿಸಿದೆ

Leave a Reply

Your email address will not be published. Required fields are marked *