ನಾನೊಬ್ಬ ಸಂಸ್ಕಾರವಂತ ಹಾಗಾಗಿ ನಾರಾಯಣಸ್ವಾಮಿ ಚಲವಾದಿಯವರನ್ನು ನಾಯಿ ಅನ್ನಲ್ಲ: Pradeep Eshwar

ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲಾಗದ Pradeep Eshwar ವಿಷಯಾಂತರ ಮಾಡುವ ಪ್ರಯತ್ನ ಮಾಡಿದರು

ಬೆಂಗಳೂರು: ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ನಾರಾಯಣಸ್ವಾಮಿ ಚಲವಾದಿ ಸಚಿವ ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಮಾತಾಡುವಾಗ ಬಳಸಿದ ನಾಯಿ ಪದ ಭಾರೀ ಚರ್ಚೆಗೀಡಾಗುತ್ತಿದೆ.

 ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ತಾನು ಪ್ರಿಯಾಂಕ್ ಖರ್ಗೆ ಜೊತೆ ನಿಂತಿರುವುದಾಗಿ ಹೇಳಿದರು. ತಮ್ಮ ನಾಯಕರ ಬಗ್ಗೆ ಮಾತಾಡುವಾಗ ನಾಯಿ ಅಂತ ಪದ ಬಳಸಿದರೆ ನೋವಾಗುತ್ತದೆ, ಅಸಲಿಗೆ ನಾರಾಯಣಸ್ವಾಮಿ ಹೇಳಿದ ಆನೆ-ನಾಯಿ ಕತೆಯಲ್ಲಿ ಖರ್ಗೆಯವರು ಆನೆ, ಆದರೆ ನಾರಾಯಣಸ್ವಾಮಿಯವರನ್ನು ತಾನು ನಾಯಿ ಅಂತ ಅನ್ನಲ್ಲ, ಯಾಕೆಂದರೆ ತಾನೊಬ್ಬ ಸಂಸ್ಕಾರವಂತ ಎಂದು ಈಶ್ವರ್ ಹೇಳಿದರು.

Leave a Reply

Your email address will not be published. Required fields are marked *