ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ವಿವಾದಕ್ಕೆ ಕಾರಣ ಆಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿ ರಚಿತಾ ರಾಮ್ ಅವರು ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ರಚಿತಾ ರಾಮ್ ಅವರು ಅಭಿನಯಿಸಿದ್ದಾರೆ. ಈ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಿಡುಗಡೆ ಆಯಿತು. ಇದೀಗ ರಚಿತಾ ರಾಮ್ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ನಟಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಸಿನಿಮಾದ ಪ್ರಚಾರಕ್ಕೆ ಬಾರದೇ ರಚಿತಾ ರಾಮ್ ಅವರು ಅಸಹಕಾರ ತೋರುತ್ತಿದ್ದಾರೆ ಎಂದು ನಿರ್ದೇಶಕ ನಾಗಶೇಖರ್ ನಟ ಶ್ರೀನಗರ ಕಿಟ್ಟಿ ಅವರು ಆರೋಪಿಸಿದ್ದಾರೆ

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರ್ದೇಶಕ ನಾಗಶೇಖರ್ ಅವರು ಮಾತನಾಡಿ,’ಸುದೀಪ್, ದರ್ಶನ್, ನಾಗಾರ್ಜುನ, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ದೊಡ್ಡ ಕಲಾವಿದರು ಪ್ರಚಾರ ಮಾಡುತ್ತಾರೆ. ರಶ್ಮಿಕಾ ಮಂದಣ್ಣ ಕಾಲು ಪೆಟ್ಟಾಗಿದ್ದರೂ ಕೂಡ ಬಂದು ಪ್ರಮೋಷನ್ ಮಾಡುತ್ತಾರೆ. ಈ ಕಾಲಘಟ್ಟದಲ್ಲಿ ರಚಿತಾ ರಾಮ್ 3 ದಿನ ಬಿಡುವು ಮಾಡಿಕೊಂಡು ನಮ್ಮ ಸಿನಿಮಾದ ಪ್ರಚಾರಕ್ಕೆ ಬರಬಹುದಿತ್ತು ಎಂದು ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.