ಬೆಂಗಳೂರು : ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ದಾ*ಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಅಧಿಕಾರಿಗಳಿಗೆ ಸೇರಿದ ಎಂಟು ಸ್ಥಳದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಯಾರ ಮೇಲೆ ದಾಳಿ? ಪ್ರಕಾಶ – ಬಿಬಿಎಂಪಿ ಸಹಾಯಕ ಎಂಜಿನಿಯರ್ ( ಗೋವಿಂದರಾಜ ನಗರ ಬೆಂಗಳೂರು), ಡಾ. ಎಸ್. ಪ್ರದೀಪ್, ಸಹಾ ಸಂಶೋಧನಾ ನಿರ್ದೇಶಕ, ಸಾವಯುವ ಕೃಷಿ (ಶಿವಮೊಗ್ಗ), ಲತಾ ಮಣಿ, ಲೆಕ್ಕಧಿಕಾರಿ, ಚಿಕ್ಕಮಗಳೂರು ಪುರಸಭೆ, ಕೆ.ಜೆ. ಅಮರನಾಥ್, ಮುಖ್ಯಾಧಿಕಾರಿ ಆನೇಕಲ್ ಪುರಸಭೆ, ಧೃವರಾಜ್, ನಗರ ಪೊಲೀಸ್ ನೀರಿಕ್ಷಕ ಗದಗ, ಅಶೋಕ್ ವಲ್ಸಂದ್ ಎಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ, ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್ ಆರ್ಡಿಪಿಆರ್ ಕಲಬುರಗಿ, ರಾಮಚಂದ್ರ, ಪಿಡಿಓ ಕಲಬುರಗಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.