ನಟ ಸತೀಶ್ ನೀನಾಸಂ ಮತ್ತು ಸಪ್ತಮಿ ಗೌಡ ಒಟ್ಟಿಗೆ ನಟಿಸಿರುವ ‘ರೈಸ್ ಆಫ್ ಅಶೋಕ’ ಸಿನಿಮಾದ ಬಿಡುಗಡೆ ಕೆಲವೇ ದಿನಗಳಲ್ಲಿ ಆಗಲಿದ್ದು, ಸಿನಿಮಾದ ಡಬ್ಬಿಂಗ್ ಮುಗಿದಿದೆ.

ಸಿನಿಮಾ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಿನಿಮಾ ತಂಡವನ್ನು ಕೊಂಡಾಡಿದ ಸತೀಶ್ ಬಹಳ ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿರುವುದಾಗಿ ಹೇಳಿದರು. ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಸಪ್ತಮಿ ಗೌಡ ಬಗ್ಗೆ ಮಾತನಾಡಿ, ಸಪ್ತಮಿ ಅಂಥಹಾ ನಟಿಯನ್ನು ನಾನು ನೋಡಿಲ್ಲ. ಬಹಳ ಶ್ರಮ ಹಾಕಿ ಕೆಲಸ ಮಾಡುತ್ತಾರೆ, ಬಹಳ ಸರಳವಾಗಿ ಇರುತ್ತಾರೆ ಎಂದು ಉದಾಹರಣೆ ಸಹಿತ ಹೇಳಿದರು.

