ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಮನೆಯಲ್ಲೇ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಮಹಿಳೆ ಲಕ್ಕಭ ವಿರುದ್ಧ ಸಾರ್ವಜನಿಕರು ಸಿಡಿದದ್ದಿದ್ದಾರೆ ಗ್ರಾಮಸ್ಥರು ಈ ಘಟನೆ ಬೆಳಕಿಗೆ ಬಂದ ಬಳಿಕ ಲೆಕ್ಕವಾಗಿ ಧರ್ಮದೇಟು ನೀಡಿ ಬಾಲಕಿಯನ್ನು ರಕ್ಷಿಸಿದ್ದಾರೆ.

14 ವರ್ಷದ ಬಾಲಕಿಯನ್ನು ಮನೆಯಲ್ಲಿ ಮಂಚದ ಕೆಳಗೆ ಅಡಗಿಸಿ ಲೆಕ್ಕವ ಚಿತ್ರ ಹಿಂಸೆ ನೀಡುತ್ತಿದ್ದಳು. ಇದನ್ನು ಅನುಮಾನಿಸಿದ ಗ್ರಾಮಸ್ಥರು ಲೆಕ್ಕವ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಬಾಲಕಿ ಕಠಿಣ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಳು ತಕ್ಷಣವೇ ಲಕ್ಕವ ವಿರುದ್ಧ ಕೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ನೀಡಿ ಬಾಲಕಿಯನ್ನು ರಕ್ಷಿಸಿದ್ದಾರೆ. ಲಕ್ಕವ್ವ ಬಡ ಕುಟುಂಬಗಳ,ಮನೆ ಬಿಟ್ಟು ಬಂದವರು,ಅನಾಥರು,ಮತ್ತು ನೊಂದ ಯುವತಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ಉದ್ಯೋಗ,ಮದುವೆಯ ಭರವಸೆ ನೀಡುತ್ತ ಮನೆಗೆ ಕರೆದುಕೊಂಡು ಹೋಗುತ್ತಿದ್ದು, ನಂತರ ಆ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು ಅನ್ನುವಂತಹ ಶಂಕೆ ವ್ಯಕ್ತವಾಗಿದೆ. ಇದೇ ರೀತಿಯ ಇನ್ನೊಂದು ಘಟನೆ ಹಿಂದೆ ಚಿಕ್ಕಮಗಳೂರಿನ ಯುವತಿಯನ್ನು ಕರೆದುಕೊಂಡು ಬಂದಾಗ ನಡೆದಿದೆ.
ಗ್ರಾಮಸ್ಥರು ತಕ್ಷಣ ತುರ್ತು ಸಹಾಯವಾಣಿ ವನ್ ವನ್ ಟು ಗೆ ಕರೆ ಮಾಡಿ ಲಕ್ಕವ ಮತ್ತು ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.