ಬೀದರ್ : ಗೂಡ್ಸ್ ವಾಹನವೊಂದು ಭೀಕರ ಅಪಘಾತಕ್ಕೀಡಾಗಿದೆ. 7 ಜನ ಪ್ರಯಾಣಿಕರಿದ್ದ ಗೂಡ್ಸ್ ವಾಹನ ಏಕಾಏಕಿ ಬಾವಿಗೆ ಬಿದ್ದಿದೆ. ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದ ಬಳಿಯ ರಸ್ತೆಯಲ್ಲಿ ರಾತ್ರಿ 9:30ರ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಗೂಡ್ಸ್ ವಾಹನವೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಗೂಡ್ಸ್ ವಾಹನವೊಂದು ರಸ್ತೆಯಲ್ಲಿ ಹೋಗುವಾಗ ಏಕಾಏಕಿ ರಸ್ತೆ ಪಕ್ಕದ ಬಾವಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಈ ದುರಂತದಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಘೋಡಂಪಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ರಸ್ತೆ ಬದಿಯ ಬಾವಿಗೆ ಬಿದ್ದ ಗೂಡ್ಸ್ ವಾಹನ!
ಬೀದರ್ನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ತೆರಳುತ್ತಿದ್ದ ಗೂಡ್ಸ್ ವಾಹನವು ಅತಿವೇಗದಿಂದ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ವಾಹನವು ರಸ್ತೆಯಿಂದ ಹೊರಗೆ ಜಾರಿ, ಪಕ್ಕದ ಬಾವಿಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ ವಾಹನದಲ್ಲಿದ್ದ ಏಳು ಜನರ ಪೈಕಿ, ಘೋಡಂಪಳ್ಳಿ ಗ್ರಾಮದ ಚಾಲಕ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತುರಾಜ್ (45) ಮತ್ತು ರವಿ (18) ಎಂಬ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಗ್ರಾಮದ ನಿವಾಸಿಗಳಾಗಿದ್ದರು.
ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ!
ಇನ್ನೂ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಅರ್ಜುನ್, ಪ್ರಜ್ವಲ್, ಪವನ್ ಮತ್ತು ಸಂಗಮೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಘೋಡಂಪಳ್ಳಿ ಗ್ರಾಮದವರಾಗಿದ್ದು, ಪ್ರಸ್ತುತ ಬೀದರ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಯನ್ನು ತೀವ್ರಗೊಳಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಘಟನೆಯಿಂದ ಘೋಡಂಪಳ್ಳಿ ಗ್ರಾಮದಲ್ಲಿ ಶೋಕ ಆವರಿಸಿದೆ. ಮೃತರ ಕುಟುಂಬಕ್ಕೆ ಸ್ಥಳೀಯರು ಸಾಂತ್ವನ ನೀಡುತ್ತಿದ್ದು, ಗಾಯಾಳುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಸಾಗುವ ವಾಹನಗಳು ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜೊತೆಗೆ, ರಸ್ತೆಯ ದುರಸ್ತಿ ಮತ್ತು ಬಾವಿಗಳ ಸುತ್ತ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದ್ದಾ