Sudeep ಅಭಿಮಾನಿಗಳಿಗೆ ‘Maximum ಖುಷಿ’, ಹೊಸ ಸಿನಿಮಾ ಘೋಷಿಸಲಿರುವ ಕಿಚ್ಚ..!

ಫ್ರೆಂಡ್ಶಿಪ್ಗಾಗಿ ಫ್ರೆಂಡ್ಶಿಪ್ ಸಾಂಗ್ ಹೇಳಿದ ಸುದೀಪ್; ಮೆಲೋಡಿ ಹಾಡಿಗೆ ಕಿಚ್ಚನ ಧ್ವನಿ.

ಕನ್ನಡದಲ್ಲಿ ಸ್ಟಾರ್ ನಟರುಗಳು ಒಂದರ ಹಿಂದೊಂದು ಸಿನಿಮಾ ಮಾಡುತ್ತಿಲ್ಲ ಎಂಬ ದೂರು ಇದೆ. ಆದರೆ ಸುದೀಪ್ ಅವರು ಈ ನಿಟ್ಟಿನಲ್ಲಿ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಹೊಸದೊಂದು ಸಿನಿಮಾ ಘೋಷಿಸಲು ಮುಂದಾಗಿದ್ದಾರೆ. ತಮಗೆ ಹಿಟ್ ಕೊಟ್ಟ ನಿರ್ದೇಶಕನ ಜೊತೆಗೆ ಮತ್ತೊಮ್ಮೆ ಸಿನಿಮಾ ಮಾಡಲಿದ್ದಾರೆ ಕಿಚ್ಚ.

ಕನ್ನಡದ ಸ್ಟಾರ್ ನಟರುಗಳು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ ಎಂಬ ದೂರು ನಿರ್ಮಾಪಕರು, ವಿತರಕರು, ಪ್ರದರ್ಶಕರ ಜೊತೆಗೆ ಸಿನಿಮಾ ಪ್ರೇಮಿಗಳಿಂದಲೂ ಕೇಳಿ ಬರುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾ ಒಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ತಿಂಗಳುಗಳೇ ಕಳೆದು ಹೋಗಿವೆ. ಯಾರೂ ಹೊಸ ಸಿನಿಮಾಗಳನ್ನು ಘೋಷಿಸುತ್ತಿಲ್ಲ. ಇದರ ನಡುವೆ ಕಿಚ್ಚ ಸುದೀಪ್ ಇದೀಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ. ಅದೂ ಇತ್ತೀಚೆಗಷ್ಟೆ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕರೊಬ್ಬರ ಜೊತೆಗೆ ಸಿನಿಮಾ ಘೋಷಿಸಲು ಕಿಚ್ಚ ಮುಂದಾಗಿದ್ದಾರೆ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡ ಈ ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿತ್ತು. ಎಲ್ಲಿಯೂ ಬೋರ್ ಹೊಡೆಸದೆ, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂಡಿಸಿದ್ದ ಸಿನಿಮಾ ಇದು. ಸುದೀಪ್ ತಮ್ಮ ಅದ್ಭುತ ನಟನೆ, ಆಕ್ಷನ್, ಡೈಲಾಗ್ಗಳಿಂದ ಪ್ರೇಕ್ಷಕರನ್ನು ಖುಷಿ ಪಡಿಸಿದ್ದರು. ಇದೀಗ ಇದೇ ಸಿನಿಮಾದ ನಿರ್ದೇಶಕರ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ ಕಿಚ್ಚ ಸುದೀಪ್.

Leave a Reply

Your email address will not be published. Required fields are marked *