ಬೆಂಗಳೂರು: ಶೇಷಾದ್ರಿಪುರಂನ ನಮ್ಮ ಫಿಲ್ಟರ್ ಕಾಫಿ ಶಾಪ್ ನಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಗಲಾಟೆಯಾಗಿದೆ.

ಎಕ್ಸ್ಟ್ರಾ ಕಾಫಿ ಕಪ್ ಕೊಡದಿದ್ದಕ್ಕೆ ಹೋಟೆಲ್ ಸಿಬ್ಬಂದಿಗೆ ನಾಲ್ಕೈದು ಜನ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಫಿ ಕುಡಿಯಲು ಶಾಪ್ ಗೆ ಬಂದಿದ್ದ ಗ್ರಾಹಕರು ಕಾಫಿಯನ್ನು ಕೊಂಡು ಮತ್ತೊಂದು ಎಕ್ಸ್ಟ್ರಾ ಕಪ್ ಕೇಳಿದ್ದಾರೆ ಇದೇ ವೇಳೆ ಹೋಟೆಲ್ ಸಿಬ್ಬಂದಿ ಕೊಡಲು ನಿರಾಕರಿಸಿದ್ದಕ್ಕೆ ಗ್ರಾಹಕರು ಹೋಟೆಲ್ ಸಿಬ್ಬಂದಿಗೆ ಅವಾಚವಾಗಿ ನಿಂದಿಸಿ ಹಲ್ಲಿಗೆ ಮುಂದಾಗಿದ್ದಾರೆ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗಿದೆ.