ಅಂಜೂರ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಅಂಜೂರ ಎಲೆಗಳಲ್ಲಿಯೂ ಅನೇಕ ರೀತಿಯ ಔಷಧೀಯ ಗುಣಗಳಿಗೆ ಎಂಬುದು ಹಲವರಿಗೆ ತಿಳಿದಿಲ್ಲ. ಆದರೆ ಅಂಜೂರ ಎಲೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಈ ಅಂಜೂರ ಎಲೆಗಳನ್ನು ಬಳಸಿಕೊಳ್ಳುವ ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಅದು, ಅಂಜೂರ ಎಲೆಯಿಂದ ಚಹಾ ತಯಾರಿಸುವುದು. ಕೇಳುವುದಕ್ಕೆ ಬಹಳ ವಿಚಿತ್ರವೆನಿಸಿದರೂ ಕೂಡ ಇದು ಮಧುಮೇಹ ನಿರ್ವಹಣೆಗೆ ಅತ್ಯುತ್ತಮ ಸೇರ್ಪಡೆ ಎಂದರೆ ತಪ್ಪಾಗಲಾರದು. ಈ ಎಲೆಯ ಆರೋಗ್ಯ ಪ್ರಯೋಜನವನ್ನು ಸರಳವಾಗಿ ಆನಂದಿಸಲು ಇದಕ್ಕಿಂತ ಒಳ್ಳೆಯ ದಾರಿ ಬೇರೆ ಯಾವುದು ಇಲ್ಲ.

ಈ ಚಹಾ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಪ್ರತಿದಿನ 1- 2 ಕಪ್ ಕುಡಿಯಬಹುದು. ವೈದ್ಯರು ಕೂಡ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಈ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ದೇಹ ಶಾಂತಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಈ ಚಹಾವನ್ನು ದಿನದ ಯಾವುದೇ ಸಮಯದಲ್ಲಾದರು ಆನಂದಿಸಬಹುದು.