ಬೆಂಗಳೂರು: ಶುಭ ಆಷಾಢ ಶುಕ್ರವಾರದಂದೇ ನಮ್ಮ ಮನೆಗೆ ಹೊಸ ಸದಸ್ಯಳ ಆಗಮನವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಶುಭ ಆಷಾಢ ಶುಕ್ರವಾರದಂದು, ನಮ್ಮ ಕುಟುಂಬಕ್ಕೆ ಹೊಸ ಸದಸ್ಯಳನ್ನು ಸ್ವಾಗತಿಸಿದೆವು. ನಾವು ಅವಳನ್ನು ಗೌರಿ, ಲಕ್ಷ್ಮಿ, ರಾಧೆ ಹೀಗೆಲ್ಲ ಹೆಸರುಗಳಿಂದ ಕರೆಯುತ್ತಿದ್ದೇವೆ. ಅವಳು ತುಂಬಾ ದೈವಿಕಳಾಗಿದ್ದು, ಹಾಡನ್ನು ಇಷ್ಟಪಡುತ್ತಾಳೆ’’ ಎಂದು ಸೂರ್ಯ ಉಲ್ಲೇಖಿಸಿದ್ದಾರೆ.

ಅಂದಹಾಗೆ, ತೇಜಸ್ವಿ ಸೂರ್ಯ ಮನೆಗೆ ಹೆಣ್ಣು ಕರುವೊಂದರ ಆಗಮನವಾಗಿದ್ದು, ಅದನ್ನು ತೇಜಸ್ವಿ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಹಾಡು ಹಾಡಿ ಸ್ವಾಗತಿಸಿದ್ದಾರೆ.




