ಪಾರ್ಟಿಗಳಲ್ಲಿ ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ, hotel owners ಮೇಲೂ ಕೇಸ್..!

ಪಾರ್ಟಿಗಳಲ್ಲಿ ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ, hotel owners ಮೇಲೂ ಕೇಸ್..!

ಬೆಂಗಳೂರು : ಬೆಂಗಳೂರು  ಹೊರವಲಯದಲ್ಲಿ ನಿರಂತರವಾಗಿ ಪಾರ್ಟಿ, ಮೋಜು-ಮಸ್ತಿಗಳು ನಡೆಯುತ್ತಲೇ ಇರುತ್ತವೆ. ರೆಸಾರ್ಟ್, ಹೋಂ ಸ್ಟೇ, ಹೋಟೆಲ್ಗನ್ನು ಬುಕ್ ಮಾಡುವ ಪಾರ್ಟಿ ಆಯೋಜಕರು, ಬರ್ತ್ ಡೇ, ಎಂಗೇಜ್ಮೆಂಟ್, ಮದುವೆ, ರೇವ್ ಪಾರ್ಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇಂಥ ಹಲವು ಕಾರ್ಯಕ್ರಮದಲ್ಲಿ ಡ್ರಗ್ಸ್ ಸೇವನೆ ಕೂಡ ನಡೆಯುತ್ತದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಸೀಜ್ ಮಾಡಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಶಾನ್ಯ ವಿಭಾಗ ಪೊಲೀಸರು ಮಾಲೀಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಜುಲೈ 5 ರಂದು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ರೆಸಾರ್ಟ್, ಹೋಂ ಸ್ಟೇ, ಫಾರ್ಮ್ ಹೌಸ್, ಹೋಟೆಲ್ ಮಾಲೀಕರ ಜೊತೆಗೆ ಸಭೆ ನಡೆಸಿದ ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಎಚ್ಚರಿಕೆ ಕೊಟ್ಟಿದ್ದಾರೆ. ಮಾಲೀಕರು ಕಾನೂನಾತ್ಮಕವಾಗಿ ಏನು ಮಾಡಬೇಕು? ಏನು ಮಾಡಬಾರದು ಎಂಬ ಸೂಚನೆಯನ್ನು ಈ ಸಭೆಯಲ್ಲಿ ಕೊಡಲಾಗಿದೆ.

ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ನೀಡಿದ ಸೂಚನೆಗಳೇನು?

ಯಾವುದೇ ಹೋಂ ಸ್ಟೇ ನಡೆಸುವವರು ಪ್ರವಾಸೋದ್ಯಮ ಇಲಾಖೆ ಸೇರಿದಂತೆ, ಪೊಲೀಸರ ಅನುಮಾತಿ ಪಡೆದಿರಬೇಕು. ಪ್ರತಿನಿತ್ಯ ಬಾಡಿಗೆ ನೀಡುವವರ ಮಾಹಿತಿಯನ್ನು ಪೊಲೀಸರಿಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳು ಪಾರ್ಟಿಯಲ್ಲಿ ನಡೆದರೆ ಮಾಲೀಕರ ವಿರುದ್ಧವೂ ಕೇಸ್ ಮಾಡಲಾಗುತ್ತದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *