ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನದ ಬಗ್ಗೆ ಚಂದನ್ ಇತ್ತೀಚೆಗೆ ಮಾತನಾಡಿದ್ದಾರೆ. ಅವರು ತಮ್ಮ ಹಿಂದಿನ ಸಂಬಂಧವನ್ನು ನೆನಪಿಸಿಕೊಂಡು, ವಿಚ್ಛೇದನದ ನಿರ್ಧಾರದ ಬಗ್ಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ. ಆದರೂ, ನಿವೇದಿತಾ ಅವರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ವಿಚ್ಛೇದನಕ್ಕೆ ವೈಯಕ್ತಿಕ ವ್ಯತ್ಯಾಸಗಳೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರದ್ದು ಈಗ ಮುಗಿದು ಹೋದ ಅಧ್ಯಾಯ. ಇವರು ಮತ್ತೆ ಎಂದಿಗೂ ಒಂದಾಗುವುದೇ ಇಲ್ಲ. ಇದನ್ನು ಅವರು ಕೂಡ ಸ್ಪಷ್ಟ ಮಾತುಗಳಲ್ಲಿ ಹೇಳಿಯಾಗಿದೆ. ಆದರೆ, ಇಬ್ಬರ ಮಧ್ಯೆ ಮೂಡಿದ್ದ ಭಾವನೆ ಹಾಗೂ ಸಂಬಂಧ ಅಷ್ಟು ಬೇಗ ಕಡಿದು ಹೋಗುವುದು ಅಲ್ಲವೇ ಅಲ್ಲ. ಈ ಬಗ್ಗೆ ಚಂದನ್ ಶೆಟ್ಟಿ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಆಗಾಗ ನಿವೇದಿತಾ ನೆನಪಾಗುತ್ತಾರೆ ಎಂದು ಅವರು ಹೇಳಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿಸಿ ಮದುವೆ ಆದರು. ಆದರೆ, ಇವರ ಸಂಬಂಧ ಹೆಚ್ಚು ವರ್ಷ ಬರಲೇ ಇಲ್ಲ. ಇವರು ಒಟ್ಟಾಗಬೇಕು ಎಂದು ಸಾಕಷ್ಟು ಪ್ರಯತ್ನಿಸಿದರೂ ಅದು ಯಶಸ್ಸು ಕಾಣಲಿಲ್ಲ. ಆದರೆ, ಬೇರೆ ದಾರಿ ಕಾಣದೆ ಇವರು ಡಿವೋರ್ಸ್ ಪಡೆದು ಬೇರೆ ಆಗಬೇಕಾಯಿತು. ಅವರು ಈ ನಿರ್ಧಾರದ ಬಗ್ಗೆ ಎಂದಿಗೂ ಬೇಸರ ಮಾಡಿಕೊಂಡಿಲ್ಲ.
‘ನಮ್ಮ ಮಧ್ಯೆ ಚೀಟಿಂಗ್ ಆಗಿಲ್ಲ, ಅದು ಪ್ಲಸ್. ಇಬ್ಬರ ಜೀವನ ಹೊಂದಾಣಿಕೆ ಆಗುತ್ತಿರಲಿಲ್ಲ. ನಾನು ಸಿಂಪಲ್ ಮ್ಯಾನ್. ಅವಳು ಪಾಶ್. ನಾನು ರೋಡ್ ಸೈಡ್ ಅಲ್ಲಿ ಬೇಕಾದರೂ ಊಟ ಮಾಡ್ತೀನಿ. ನಾನು ಆ ರೀತಿಯವನು’ ಎಂದು ವಿಚ್ಛೇದನಕ್ಕೆ ಕಾರಣ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.