ಇಂದಿನ ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ದೈನಂದಿನ ದಿನದ ಭಾಗವಾಗಿ ಹೋಗಿದೆ. ಬಹುತೇಕ ಹೆಚ್ಚಿನವರು ಈ ಸ್ಮಾರ್ಟ್ ಫೋನ್ಗಳಿಗೆ ದಾಸರಾಗಿ ಹೋಗಿದ್ದಾರೆ. ಹೌದು ದಿನದ ಹೆಚ್ಚಿನ ಸಮಯ ಮೊಬೈಲ್ನಲ್ಲಿಯೇ ಕಳೆಯುತ್ತಾರೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರೋಲ್ಲ ಅಂತಾರೆ. ಹೌದು ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ನಲ್ಲಿಯೇ ಅತಿ ಹೆಚ್ಚು ಸಮಯ ಕಳೆಯುತ್ತಾರೆ. ಆದ್ರೆ ಹೀಗೆ ಜಾಸ್ತಿ ಹೊತ್ತು ಫೋನ್ ನೋಡುವುದು ಅಷ್ಟು ಒಳ್ಳೆಯದಲ್ಲ. ಇದೇ ರೀತಿ ನೀವು ಕೂಡಾ ಫೋನ್ ಚಟಕ್ಕೆ ಒಳಗಾಗಿದ್ದೀರಾ? ಹಾಗಿದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಈ ಚಟದಿಂದ ಹೊರ ಬನ್ನಿ.

ನೋಟಿಫಿಕೇಶನ್ ಆಫ್ ಮಾಡಿ: ಮೊಬೈಲ್ನಲ್ಲಿ ಆಗಾಗ್ಗೆ ನೋಟಿಫಿಕೇಶನ್ಗಳು ಬರುತ್ತಲೇ ಇರುತ್ತವೆ. ಹೀಗೆ ನೋಟಿಫಿಕೇಶನ್ ಬಂದಾಗ ಬಹುತೇಕ ಎಲ್ಲರೂ ಪದೇ ಪದೇ ಮೊಬೈಲ್ ನೋಡೇ ನೋಡುತ್ತಾರೆ. ಹಾಗಾಗಿ ನೋಟಿಫಿಕೇಶನ್ ಆಫ್ ಮಾಡಿ. ಹೌದು ನೋಟಿಫಿಕೇಶನ್ ಬಂದರೆ ಮೊಬೈಲ್ ಕೂಡಾ ಹೆಚ್ಚು ನೋಡುತ್ತೀರಿ. ಆದ್ದರಿಂದ ಮೊಬೈಲ್ ನೋಟಿಫಿಕೇಶನ್ ಆಫ್ ಮಾಡಿ ಇಟ್ಟುಕೊಳ್ಳಿ.
ಆಪ್ಲಿಕೇಶನ್ ತೆಗೆದು ಹಾಕಿ: ನೀವು ನಿಮ್ಮ ಮೊಬೈಲ್ನಲ್ಲಿ ಯಾವ ಆಪ್ಲಿಕೇಶನ್ನಲ್ಲಿ ಅತೀ ಹೆಚ್ಚು ಸಮಯವನ್ನು ಕಳೆಯುತ್ತೀರೋ, ಆ ಆಪ್ಲಿಕೇಷನ್ನನ್ನು ಡಿಲಿಟ್ ಮಾಡಿ, ಈ ಮೂಲಕ ನೀವು ಮೊಬೈಲ್ ಅತಿ ಹೆಚ್ಚು ಬಳಕೆ ಮಾಡುವುದನ್ನು ಕಡಿಮೆ ಮಾಡಬಹುದು.
ವೀಕ್ಷಣಾ ಅವಧಿ: ದಿನವಿಡೀ ಮೊಬೈಲ್ ನೋಡುವ ಬದಲು, ಮೊಬೈಲ್ ನೋಡಲು ಇಂತಿಷ್ಟು ಸಮಯ ಅಂತ ಮೀಸಲಿಡಿ. ಎರಡು ಗಂಟೆಗೆ 10 ನಿಮಿಷವೋ ಹೀಗೆ ಮೊಬೈಲ್ ನೋಡಿ. ಹೀಗೆ ಮಾಡುವುದರಿಂದ ನೀವು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬಹುದು.